ವಾಣಿಜ್ಯ ಸುದ್ದಿ | ಷೇರುಸೂಚ್ಯಂಕ | ಮಾರುಕಟ್ಟೆ ದರ
ಮುಖ್ಯ ಪುಟ » ಸುದ್ದಿ ಜಗತ್ತು » ವ್ಯವಹಾರ » ಷೇರುಸೂಚ್ಯಂಕ » ಮತ್ತೆ ಗರಿಗೆದರಿದ ಷೇರು ಮಾರುಕಟ್ಟೆ (Bombay Stock Exchange | Sensex | Nifty)
Bookmark and Share Feedback Print
 
ಮುಂಬೈ ಷೇರು ಮಾರುಕಟ್ಟೆ ಸೂಚ್ಯಂಕ ದಿನಾರಂಭದಲ್ಲಿ ಮತ್ತೆ 150 ಪಾಯಿಂಟ್ ಗಳಿಸಿಕೊಂಡು ಏರಿಕೆಯಾಗಿದೆ. ರಿಯಾಲ್ಟಿ, ಬ್ಯಾಂಕಿಂಗ್ ಹಾಗೂ ಮೆಟಲ್ ಷೇರುಗಳ ಕೊಳ್ಳುವಿಕೆಗೆ ಬಲ ಬಂದಿದ್ದು ಏರಿಕೆಗೆ ಕಾರಣವಾಗಿದೆ.

ಬಿಎಸ್ಇ 30 ಷೇರು ಸೂಚ್ಯಂಕ 149.97 ಪಾಯಿಂಟ್ ಅಂದರೆ ಶೇ.0.82ರಷ್ಟು ಏರಿಕೆ ದಾಖಲಿಸಿ 18,355.84ಕ್ಕೆ ತಲುಪಿದೆ. ಇದಕ್ಕೂ ಮೊದಲ ವಹಿವಾಟಿನಲ್ಲಿ 234.75 ಪಾಯಿಂಟ್ ಚೇತರಿಸಿತ್ತು.

ರಾಷ್ಟ್ರೀಯ ಷೇರು ಮಾರುಕಟ್ಟೆ ಸೂಚ್ಯಂಕ ನಿಫ್ಟಿ ಶೇ.0.76ರಷ್ಟು ಏರಿಕೆ ದಾಖಲಿಸಿ 5,513.95ಕ್ಕೆ ತಲುಪಿದೆ.

ಆಟೋ ಷೇರುಗಳು ಉತ್ತಮ ಏರಿಕೆ ದಾಖಲಿಸುತ್ತಿದ್ದು ಮಾರುತಿ ಸುಝುಕಿ ಉತ್ತಮ ಲಾಭ ಗಳಿಸಿದ ಕಾರಣ ಷೇರುಪೇಟೆಯಲ್ಲಿ ಏರಿಕೆ ಕಂಡಿದೆ.

ಹಾಂಗ್‌ಕಾಂಗ್‌ನ ಹ್ಯಾಂಗ್‌ಸೆಂಗ್ ಮಾರುಕಟ್ಟೆ ಶೇ.1.38ರಷ್ಟು ಏರಿಕೆಯಾಗಿದೆ. ಜಪಾನಿನ ನಿಕ್ಕಿ ಷೇರುಪೇಟೆ ಶೇ.1.60ರಷ್ಟು ಏರಿಕೆ ಕಂಡಿದೆ. ಯುಎಸ್‌ನ ಡೋ ಜೋನ್ಸ್ ಇಂಡಸ್ಟ್ರಿಯಲ್ ಅವರೇಜ್ ಶೇ.2.54ರಷ್ಟು ಏರಿಕೆ ಕಂಡಿದೆ.
ಸಂಬಂಧಿತ ಮಾಹಿತಿ ಹುಡುಕಿ