ಮುಂಬೈ ಷೇರು ಮಾರುಕಟ್ಟೆ ಸೂಚ್ಯಂಕ ದಿನದಾರಂಭದ ವಹಿವಾಟಿನಲ್ಲಿ 78 ಪಾಯಿಂಟ್ ಏರಿಕೆ ಕಂಡಿದೆ.
ಬಿಎಸ್ಇ 30 ಷೇರು ಸೂಚ್ಯಂಕ 78 ಪಾಯಿಂಟ್ ಅಂದರೆ ಶೇ.0.42ರಷ್ಟು ಏರಿಕೆ ಕಂಡು 18,316.32ಕ್ಕೆ ತಲುಪಿದೆ. ಇದಕ್ಕೂ ಮೊದಲು 267 ಪಾಯಿಂಟ್ ಕುಸಿತ ಕಂಡಿದೆ.
ರಾಷ್ಟ್ರೀಯ ಷೇರು ಮಾರುಕಟ್ಟೆ ಸೂಚ್ಯಂಕ ನಿಫ್ಟಿ ಶೇ.0.48ರಷ್ಟು ಏರಿಕೆಯಾಗಿ 5,510.40ಕ್ಕೆ ತಲುಪಿದೆ.
ಹಾಂಗ್ಕಾಂಗ್ನ ಹ್ಯಾಂಗ್ಸೆಂಗ್ ಮಾರುಕಟ್ಟೆ ಶೇ.0.15ರಷ್ಟು ಏರಿಕೆಯಾಗಿದೆ. ಜಪಾನಿನ ನಿಕ್ಕಿ ಷೇರು ಸೂಚ್ಯಂಕ ಶೇ.0.39ರಷ್ಟು ಚೇತರಿಸಿದೆ. ಯುಎಸ್ನ ಡೋ ಜೋನ್ಸ್ ಇಂಡಸ್ಟ್ರಿಯಲ್ ಅವರೇಜ್ ಶೇ.0.49ರಷ್ಟು ಏರಿಕೆ ಕಂಡಿದೆ.