ವಾಣಿಜ್ಯ ಸುದ್ದಿ | ಷೇರುಸೂಚ್ಯಂಕ | ಮಾರುಕಟ್ಟೆ ದರ
ಮುಖ್ಯ ಪುಟ » ಸುದ್ದಿ ಜಗತ್ತು » ವ್ಯವಹಾರ » ಷೇರುಸೂಚ್ಯಂಕ » ಎರಡುವರೆ ವರ್ಷದಲ್ಲೇ ಬರೋಬ್ಬರಿ ಏರಿಕೆ ಕಂಡ ಸೆನ್ಸೆಕ್ಸ್ (Bombay Stock Exchange | Sensex | Nifty)
Bookmark and Share Feedback Print
 
ಮುಂಬೈ ಷೇರು ಮಾರುಕಟ್ಟೆ ಸೂಚ್ಯಂಕ ದಿನದಂತ್ಯದ ವಹಿವಾಟಿನಲ್ಲಿ ಬರೋಬ್ಬರಿ 338 ಪಾಯಿಂಟ್ ಏರಿಕೆ ಕಂಡಿದೆ. ಆ ಮೂಲಕ ಸೆಸ್ನೆಕ್ಸ್ ಎರಡೂವರೆ ವರ್ಷದಲ್ಲೇ ಅತ್ಯಧಿಕ ಮಟ್ಟಕ್ಕೆ ತಲುಪಿದೆ.

ಬಿಎಸ್ಇ 30 ಷೇರು ಸೂಚ್ಯಂಕ 338.62 ಪಾಯಿಂಟ್ ಅಂದರೆ ಶೇ.1.86ರಷ್ಟು ಏರಿಕೆ ಕಂಡು 18,560.05ಕ್ಕೆ ತಲುಪಿದೆ. ಫೆಬ್ರವರಿ 2008ರಲ್ಲಿ ಸೆನ್ಸೆಕ್ಸ್ 18,663.16ರಷ್ಟಿತ್ತು.

ರಾಷ್ಟ್ರೀಯ ಷೇರು ಮಾರುಕಟ್ಟೆ ಸೂಚ್ಯಂಕ ನಿಫ್ಟಿ ಶೇ.1.78ರಷ್ಟು ಏರಿಕೆ ಕಂಡು 5,576.95ಕ್ಕೆ ತಲುಪಿದೆ.

ಟಾಟಾ ಸ್ಟೀಲ್ ಅತ್ಯುತ್ತಮ ಏರಿಕೆ ಕಂಡಿದ್ದು ಶೇ.6.60ರಷ್ಟು ಬರೋಬ್ಬರಿ ಚೇತರಿಸಿದೆ. ಹಿಂಡಲ್ಕೋ ಶೇ.4.78, ಸ್ಟೆರ್‌ಲೈಟ್ ಶೇ.3.69, ಎಸ್‌ಬಿಐ ಶೇ.3.07, ಐಸಿಐಸಿಐ ಬ್ಯಾಂಕ್ ಶೇ.3.81, ಜಿಂದಾಲ್ ಸ್ಟೀಲ್ ಶೇ.1.68ರಷ್ಟು ಏರಿದೆ.

ಏಷ್ಯನ್ ಷೇರು ಮಾರುಕಟ್ಟೆಯೂ ಏರಿಕೆಯಾಗಿದೆ. ಜಪಾನಿನ ನಿಕ್ಕಿ ಸೂಚ್ಯಂಕ ಶೇ.2.05ರಷ್ಟು ಏರಿದೆ. ಚೀನಾದ ಶಾಂಘೈ ಸೂಚ್ಯಂಕ ಶೇ.1.5ರಷ್ಟು ಏರಿಕೆ ಕಂಡಿದೆ. ಎಂಎಸ್‌ಸಿಐ ಏಷ್ಯಾ ಪೆಸಿಫಿಕ್ ಸೂಚ್ಯಂಕವೂ ಕೊಂಚ ಏರಿಕೆ ಕಂಡಿದೆ.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಷೇರುಪೇಟೆ, ಬಿಎಸ್ಇ, ನಿಫ್ಟಿ