ಮುಂಬೈ ಷೇರು ಮಾರುಕಟ್ಟೆ ಸೂಚ್ಯಂಕ ದಿನದಾರಂಭದ ವಹಿವಾಟಿನಲ್ಲಿ ಕೊಂಚ ಇಳಿಕೆ ದಾಖಲಿಸಿದ್ದು 104 ಪಾಯಿಂಟ್ ಕುಸಿತ ಕಂಡಿದೆ.
ಬಿಎಸ್ಇ 30 ಷೇರು ಸೂಚ್ಯಂಕ ಇದಕ್ಕೂ ಮೊದಲ ಎರಡು ವಹಿವಾಟುಗಳಲ್ಲಿ 423 ಪಾಯಿಂಟ್ ಏರಿಕೆ ಕಂಡಿತ್ತು. ಇದೀಗ 104.41 ಪಾಯಿಂಟ್ ಅಂದರೆ ಶೇ.0.55ರಷ್ಟು ಇಳಿಕೆ ಕಂಡಿದೆ.
ರಾಷ್ಟ್ರೀಯ ಷೇರು ಮಾರುಕಟ್ಟೆ ಸೂಚ್ಯಂಕ ನಿಫ್ಟಿ ಶೇ.0.64ರಷ್ಟು ಇಳಿಕೆ ಕಂಡು 5,567.75ಕ್ಕೆ ತಲುಪಿದೆ.
ಇದೇ ವೇಳೆ ಹಾಂಗ್ಕಾಂಗ್ನ ಹ್ಯಾಂಗ್ಸೆಂಗ್ ಮಾರುಕಟ್ಟೆ ಶೇ.1.32ರಷ್ಟು ಇಳಿಕೆ ಕಂಡಿದೆ. ಜಪಾನಿನ ನಿಕ್ಕಿ ಷೇರು ಸೂಚ್ಯಂಕ ಶೇ.1.97ರಷ್ಟು ಕುಸಿದಿದೆ. ಯುಎಸ್ನ ಡೋ ಜೋನ್ಸ್ ಇಂಡಸ್ಟ್ರಿಯಲ್ ಅವರೇಜ್ ಶೇ.1.03ರಷ್ಟು ಇಳಿಕೆ ಕಂಡಿದೆ.