ವಾಣಿಜ್ಯ ಸುದ್ದಿ | ಷೇರುಸೂಚ್ಯಂಕ | ಮಾರುಕಟ್ಟೆ ದರ
ಮುಖ್ಯ ಪುಟ » ಸುದ್ದಿ ಜಗತ್ತು » ವ್ಯವಹಾರ » ಷೇರುಸೂಚ್ಯಂಕ » ಏರಿಕೆಯ ಅತ್ಯುತ್ಸಾಹದಲ್ಲಿ ಮುನ್ನುಗ್ಗುತ್ತಿರುವ ಷೇರುಪೇಟೆ (Bombay Stock Exchange | Sensex | Nifty)
Bookmark and Share Feedback Print
 
ಮುಂಬೈ ಷೇರು ಮಾರುಕಟ್ಟೆ ದಿನದಾರಂಭದ ವಹಿವಾಟಿನಲ್ಲಿ ಮತ್ತೆ ಏರಿಕೆಯತ್ತ ಮುಖ ಮಾಡಿದೆ. ಈಗಾಗಲೇ 19,000ಕ್ಕಿಂತ ಮೇಲೇರಿರುವ ಸೂಚ್ಯಂಕ ಇದೀಗ ಮತ್ತೆ ಮುನ್ನುಗ್ಗುತ್ತಿದೆ.

ಬಿಎಸ್ಇ 30 ಷೇರು ಸೂಚ್ಯಂಕ 87.34 ಪಾಯಿಂಟ್ ಅಂದರೆ ಶೇ.0.45ರಷ್ಟು ಏರಿಕೆ ದಾಖಲಿಸಿ 19,295.67ಕ್ಕೆ ತಲುಪಿದೆ. ಇದಕ್ಕೂ ಮೊದಲ ವಹಿವಾಟಿನಲ್ಲಿ 408 ಪಾಯಿಂಟ್ ಏರಿಕೆಯಾಗಿತ್ತು.

ರಾಷ್ಟ್ರೀಯ ಷೇರು ಮಾರುಕಟ್ಟೆ ಸೂಚ್ಯಂಕ ನಿಫ್ಟಿ 22 ಪಾಯಿಂಟ್ ಅಂದರೆ ಶೇ.0.22ರಷ್ಟು ಏರಿಕೆ ದಾಖಲಿಸಿ 5,782.00ಗೆ ತಲುಪಿದೆ. ಐಟಿ, ಆಟೋ ಮತ್ತಿತರ ಷೇರುಗಳು ಶೇ.1.23ರವರೆಗೆ ಏರಿಕೆ ದಾಖಲಿಸಿವೆ.

ಏಷ್ಯನ್ ಮಾರುಕಟ್ಟೆಯಲ್ಲಿಯೂ ಚೇತರಿಕೆ ಕಂಡು ಬಂದಿದೆ. ಜಪಾನಿನ ನಿಕ್ಕಿ ಷೇರು ಸೂಚ್ಯಂಕ ಶೇ.0.02ರಷ್ಟು ಏರಿಕೆ ಕಂಡಿದೆ. ಹಾಂಗ್‌ಕಾಂಗ್‌ನ ಹ್ಯಾಂಗ್‌ಸೆಂಗ್ ಮಾರುಕಟ್ಟೆ ಶೇ.0.05ರಷ್ಟು ಏರಿಕೆ ದಾಖಲಿಸಿದೆ. ಯುಎಸ್‌ನ ಡೋ ಜೋನ್ಸ್ ಇಂಡಸ್ಟ್ರಿಯಲ್ ಅವರೇಜ್ ಶೇ.0.78ರಷ್ಟು ಏರಿಕೆ ದಾಖಲಿಸಿದೆ.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಷೇರುಪೇಟೆ, ಬಿಎಸ್ಇ, ನಿಫ್ಟಿ