ವಾಣಿಜ್ಯ ಸುದ್ದಿ | ಷೇರುಸೂಚ್ಯಂಕ | ಮಾರುಕಟ್ಟೆ ದರ
ಮುಖ್ಯ ಪುಟ » ಸುದ್ದಿ ಜಗತ್ತು » ವ್ಯವಹಾರ » ಷೇರುಸೂಚ್ಯಂಕ » ಏರಿಕೆಯ ನಾಗಾಲೋಟ ಮುಂದುವರಿಸಿದ ಷೇರುಪೇಟೆ (Bombay Stock Exchange | Sensex | Nifty)
Bookmark and Share Feedback Print
 
ಮುಂಬೈ ಷೇರು ಮಾರುಕಟ್ಟೆ ಸೂಚ್ಯಂಕ ಮಂಗಳಾರವೂ ಏರಿಕೆಯ ನಾಗಾಲೋಟವನ್ನು ಮುಂದುವರಿಸಿದೆ. ದಿನದಂತ್ಯದ ವಹಿವಾಟಿನಲ್ಲಿ 139 ಪಾಯಿಂಟ್ ಏರಿಕೆ ಕಾಣುವ ಮೂಲಕ 32 ತಿಂಗಳಲ್ಲೇ ಅತ್ಯಧಿಕ ಮಟ್ಟಕ್ಕೆ ತಲುಪಿದೆ.

ಬಿಎಸ್ಇ 30 ಷೇರು ಸೂಚ್ಯಂಕ 138.63 ಪಾಯಿಂಟ್ ಏರಿಕೆ ಕಂಡು 19,346.96ಕ್ಕೆ ತಲುಪಿದೆ. 2008ರ ಜನವರಿ ತಿಂಗಳ ನಂತರ ಅತಿ ಹೆಚ್ಚಿನ ಏರಿಕೆ ಇದಾಗಿದೆ.

ರಾಷ್ಟ್ರೀಯ ಷೇರು ಮಾರುಕಟ್ಟೆ ಸೂಚ್ಯಂಕ ನಿಫ್ಟಿ 35.55 ಪಾಯಿಂಟ್ ಏರಿಕೆ ಕಂಡು 5,795.55ಕ್ಕೆ ತಲುಪಿದೆ.

ಬಿಎಸ್ಇ 30 ಷೇರುಗಳ ಪೈಕಿ 19 ಷೇರುಗಳು ಏರಿಕೆಯತ್ತ ಮುಖ ಮಾಡಿದರೆ, 11 ಷೇರುಗಳು ಇಳಿಕೆಯಾಗಿವೆ.

ಏರಿಕೆ ಕಂಡ ಷೇರುಗಳ ಪೈಕಿ ಇನ್ಫೋಸಿಸ್ ಷೇರು 40.45 ರೂಪಾಯಿ ಏರಿಕೆ ದಾಖಲಿಸಿದೆ. ಆದರೆ ಮೆಟಲ್, ರಿಯಾಲ್ಟಿ ಹಾಗೂ ಪವರ್ ಷೇರುಗಳು ಇಳಿಕೆಯತ್ತ ಮುಖ ಮಾಡಿದೆ.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಷೇರುಪೇಟೆ, ಬಿಎಸ್ಇ, ನಿಫ್ಟಿ