ಮುಂಬೈ ಷೇರು ಮಾರುಕಟ್ಟೆ ಸೂಚ್ಯಂಕ ಏರುಗತಿಯತ್ತಲೇ ಮುಂದುವರಿದಿದೆ. ಇಂದು ದಿನದಾರಂಭದಲ್ಲೂ 138 ಪಾಯಿಂಟ್ ಏರಿಕೆ ಕಂಡು ತನ್ನ ಏರಿಕೆಯ ನಾಗಾಲೋಟ ಮುಂದುವರಿಸಿದೆ.
ಬಿಎಸ್ಇ 30 ಷೇರು ಸೂಚ್ಯಂಕ 138.57 ಪಾಯಿಂಟ್ ಅಂದರೆ ಶೇ.0.72ರಷ್ಟು ಏರಿಕೆ ದಾಖಲಿಸಿ 19,485.53ಕ್ಕೆ ತಲುಪಿದೆ.
ರಾಷ್ಟ್ರೀಯ ಷೇರು ಮಾರುಕಟ್ಟೆ ಸೂಚ್ಯಂಕ ನಿಫ್ಟಿ 43.55 ಪಾಯಿಂಟ್ ಏರಿಕೆ ದಾಖಲಿಸಿ 5,839.10ಕ್ಕೆ ತಲುಪಿದೆ.
ಆಯಿಲ್ ಅಂಡ್ ಗ್ಯಾಸ್, ಐಟಿ, ಬ್ಯಾಂಕಿಂಗ್ ಷೇರುಗಳು ಭರ್ಜರಿ ಏರಿಕೆ ಕಾಣುತ್ತಿವೆ. ಇದೇ ವೇಳೆ ಹಾಂಗ್ಕಾಂಗ್‌ನ ಹ್ಯಾಂಗ್‌ಸೆಂಗ್ ಮಾರುಕಟ್ಟೆ ಶೇ.0.29ರಷ್ಟು ಏರಿದೆ. ಆಜರೆ ಜಪಾನಿನ ನಿಕ್ಕಿ ಮಾತ್ರ ಶೇ.0.60ಯಷ್ಟು ಕುಸಿತ ಕಂಡಿದೆ.