ವಾಣಿಜ್ಯ ಸುದ್ದಿ | ಷೇರುಸೂಚ್ಯಂಕ | ಮಾರುಕಟ್ಟೆ ದರ
ಮುಖ್ಯ ಪುಟ » ಸುದ್ದಿ ಜಗತ್ತು » ವ್ಯವಹಾರ » ಷೇರುಸೂಚ್ಯಂಕ » 85 ಪಾಯಿಂಟ್ ಕುಸಿತ ಕಂಡ ಷೇರುಪೇಟೆ (Bombay Stock Exchange | Sensex | Nifty)
Bookmark and Share Feedback Print
 
ಮುಂಬೈ ಷೇರು ಮಾರುಕಟ್ಟೆ ಸೂಚ್ಯಂಕ ದಿನದಂತ್ಯದ ವಹಿವಾಟಿನಲ್ಲಿ ಕೊಂಚ ಇಳಿಕೆ ದಾಖಲಿಸಿದೆ. ಈವರೆಗೆ ಏರಿಕೆಯತ್ತಲೇ ಸಾಗುತ್ತಿದ್ದ ಷೇರುಪೇಟೆ ಇಳಿಕೆ ಕಂಡಿದೆ.

ಬಿಎಸ್ಇ 30 ಷೇರು ಸೂಚ್ಯಂಕ ದಿನದಂತ್ಯದ ವಹಿವಾಟಿನಲ್ಲಿ 84.62 ಪಾಯಿಂಟ್ ಕುಸಿತ ಕಂಡು 19,417.49ಕ್ಕೆ ತಲುಪಿದೆ.

ರಾಷ್ಟ್ರೀಯ ಷೇರು ಮಾರುಕಟ್ಟೆ ಸೂಚ್ಯಂಕ ನಿಫ್ಟಿ 32.25 ಪಾಯಿಂಟ್ ಇಳಿಕೆ ಕಂಡು 5,901.65ಕ್ಕೆ ತಲುಪಿದೆ.

ಬಿಎಸ್ಇ 30 ಷೇರುಗಳ ಪೈಕಿ 19 ಷೇರುಗಳು ಇಳಿಕೆ ಕಂಡರೆ 10 ಷೇರುಗಳು ಏರಿಕೆಗೊಂಡಿವೆ. ಒಂದರೆ ಐಟಿಸಿ ಲಿಮಿಟೆಡ್ ಷೇರು ಮಾತ್ರ ಯಾವುದೇ ಬದಲಾವಣೆ ಕಂಡಿಲ್ಲ.

ರಿಲಯನ್ಸ್ ಇಂಡಸ್ಟ್ರೀಸ್ 9.55 ರೂಪಾಯಿಗಳಷ್ಟು ಇಳಿಕೆ ಕಂಡರೆ, ಇನ್ಫೋಸಿಸ್ ಟೆಕ್ನಾಲಜೀಸ್ 82.35 ರೂಪಾಯಿಗಳಷ್ಟು ಕುಸಿದಿದೆ. ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಷೇರು 39.40 ರೂಪಾಯಿ ಏರಿದೆ. ಆಕ್ಸಿಸ್ ಬ್ಯಾಂಕ್ 14.40 ರೂಪಾಯಿ ಏರಿದೆ. ಬ್ಯಾಂಕ್ ಆಫ್ ಬರೋಡಾ 17.45, ಎಚ್‌ಡಿಎಫ್‌ಸಿ ಬ್ಯಾಂಕ್ 18.60 ರೂಪಾಯಿ ಏರಿದೆ.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಷೇರುಪೇಟೆ, ಬಿಎಸ್ಇ, ನಿಫ್ಟಿ