ಮುಂಬೈ ಷೇರು ಮಾರುಕಟ್ಟೆ ಸೂಚ್ಯಂಕ ಮತ್ತೆ ಪುಟಿದೆದ್ದಿದೆ. ದಿನದಾರಂಭದ ವಹಿವಾಟಿನಲ್ಲಿ 197 ಪಾಯಿಂಟ್ ಏರಿಕೆ ಕಂಡು ಮತ್ತೆ ತನ್ನ ಏರಿಕೆಯ ಮಟ್ಟ ಕಾಯ್ದುಕೊಂಡಿದೆ.
ಬಿಎಸ್ಇ 30 ಷೇರು ಸೂಚ್ಯಂಕ 197.37 ಪಾಯಿಂಟ್ ಅಂದರೆ ಶೇ.1.01ರಷ್ಟು ಏರಿಕೆ ಕಂಡು 19,614.86ಕ್ಕೆ ತಲುಪಿದೆ. ಇದಕ್ಕೂ ಮೊದಲ ವಹಿವಾಟಿನಲ್ಲಿ 84.62 ಪಾಯಿಂಟ್ ಇಳಿಕೆ ಕಂಡಿತ್ತು.
ರಾಷ್ಟ್ರೀಯ ಷೇರು ಮಾರುಕಟ್ಟೆ ಸೂಚ್ಯಂಕ ನಿಫ್ಟಿ 52.35 ಪಾಯಿಂಟ್ ಅಂದರೆ ಶೇ.0.82ರಷ್ಟು ಏರಿಕೆ ಕಂಡು 5,881.05ಕ್ಕೆ ತಲುಪಿದೆ.
ಜಪಾನಿನ ನಿಕ್ಕಿ ಷೇರು ಸೂಚ್ಯಂಕ ಶೇ.0.82ರಷ್ಟು ಏರಿಕೆ ಕಂಡರೆ ಹಾಂಗ್‌ಕಾಂಗ್‌ನ ಹ್ಯಾಂಗ್‌ಸೆಂಗ್ ಮಾರುಕಟ್ಟೆ ಶೇ.0.24ರಷ್ಟು ಏರಿಕೆ ಕಂಡಿದೆ. ಯುಎಸ್‌ನ ಡೋ ಜೋನ್ಸ್ ಇಂಡಸ್ಟ್ರಿಯಲ್ ಅವರೇಜ್ ಶೇ.0.21ರಷ್ಟು ಚೇತರಿಕೆ ಕಂಡಿದೆ.