32 ತಿಂಗಳಲ್ಲೇ ಭರ್ಜರಿ ಏರಿಕೆ: 20,000 ಗಡಿ ದಾಟಿದ ಸೂಚ್ಯಂಕ
ಮುಂಬೈ, ಮಂಗಳವಾರ, 21 ಸೆಪ್ಟೆಂಬರ್ 2010( 11:55 IST )
ಮುಂಬೈ ಷೇರು ಮಾರುಕಟ್ಟೆಯ ನಾಗಾಲೋಟ ಭರ್ಜರಿಯಾಗಿ ಸಾಗಿದ್ದು, ಇದೀಗ ಸೂಚ್ಯಂಕ 2008ರ ಜನವರಿ ತಿಂಗಳ ನಂತರ ಇದೇ ಮೊದಲ ಬಾರಿಗೆ 20,000 ದಾಟಿದೆ.
ಬಿಎಸ್ಇ 30 ಷೇರು ಸೂಚ್ಯಂಕ ದಿನದಾರಂಭದ ವಹಿವಾಟಿನಲ್ಲಿ 135.42 ಪಾಯಿಂಟ್ ಏರಿಕೆ ಕಂಡು 20,041.52ಕ್ಕೆ ತಲುಪಿದೆ, 2008ರ ಜನವರಿ 17ರ ನಂತರ ಇದು ಸೂಚ್ಯಂಕ ಕಂಡ ಅತೀ ಹೆಚ್ಚಿನ ಮಟ್ಟವಾಗಿದೆ. ವಿವಿಧ ಷೇರುಗಳು ಶೇ.1.30ರವರೆಗೆ ಏರಿಕೆ ದಾಖಲಿಸಿದೆ.
ರಾಷ್ಟ್ರೀಯ ಷೇರು ಮಾರುಕಟ್ಟೆ ಸೂಚ್ಯಂಕ ನಿಫ್ಟಿ ಕೂಡಾ 6000ದ ಗಡಿ ದಾಟಿದೆ. 36.40 ಪಾಯಿಂಟ್ ಏರಿಕೆ ದಾಖಲಿಸಿದ ನಿಫ್ಟಿ 6,016.85ಕ್ಕೆ ತಲುಪಿದೆ.