ವಾಣಿಜ್ಯ ಸುದ್ದಿ
|
ಷೇರುಸೂಚ್ಯಂಕ
|
ಮಾರುಕಟ್ಟೆ ದರ
ಮುಖ್ಯ ಪುಟ
»
ಸುದ್ದಿ ಜಗತ್ತು
»
ವ್ಯವಹಾರ
»
ಷೇರುಸೂಚ್ಯಂಕ
»
32 ತಿಂಗಳ ನಂತರ ಭರ್ಜರಿಯಾಗಿ ಜಿಗಿದೆದ್ದ ಷೇರುಪೇಟೆ
(Bombay Stock Exchange | Sensex | Nifty)
Feedback
Print
32 ತಿಂಗಳ ನಂತರ ಭರ್ಜರಿಯಾಗಿ ಜಿಗಿದೆದ್ದ ಷೇರುಪೇಟೆ
ಮುಂಬೈ, ಮಂಗಳವಾರ, 21 ಸೆಪ್ಟೆಂಬರ್ 2010( 19:05 IST )
ಮುಂಬೈ ಷೇರು ಮಾರುಕಟ್ಟೆ ಸೂಚ್ಯಂಕ ದಿನದಂತ್ಯದ ವಹಿವಾಟಿನಲ್ಲಿ ತನ್ನ ಏರುಗತಿಯನ್ನು ಹಾಗೆಯೇ ಮುಂದುವರಿಸಿದ್ದು, ಬರೋಬ್ಬರಿ 32 ತಿಂಗಳ ನಂತರ 20,000ಕ್ಕಿಂತ ಮೇಲೇರಿದೆ.
ಬಿಎಸ್ಇ 30 ಷೇರು ಸೂಚ್ಯಂಕ ದಿನದಂತ್ಯಕ್ಕೆ 20,088.96ಕ್ಕೆ ತಲುಪಿದೆ. ಇದಕ್ಕೂ ಮೊದಲ ವಹಿವಾಟಿನಲ್ಲಿ ಷೇರು ಸೂಚ್ಯಂಕ 19,906ರಿಂದ ತನ್ನ ಏರಿಕೆಯ ಪಯಣ ಆರಂಭಿಸಿತ್ತು.
ರಾಷ್ಟ್ರೀಯ ಷೇರು ಮಾರುಕಟ್ಟೆ ಸೂಚ್ಯಂಕ ನಿಫ್ಟಿ ಕೂಡಾ ತನ್ನ ಸೂಚ್ಯಂಕವನ್ನು 6000ದ ಗಡಿ ದಾಟಿಸಿದೆ. 25 ಪಾಯಿಂಟ್ ಅಂದರೆ ಶೇ.0.42ರ ಏರಿಕೆ ದಾಖಲಿಸಿ 6005.45ಕ್ಕೆ ತಲುಪಿದೆ.
ಸೋಮವಾರ ಸೂಚ್ಯಂಕ 311.35 ಪಾಯಿಂಟ್‌ಗಳಷ್ಟು ಏರಿಕೆ ದಾಖಲಿಸಿತ್ತು. ಇದರಿಂದಾಗಿ ವಿದೇಶೀ ಬಂಡವಾಳಗಳ ಮೂಲಕ 373.25 ಮಿಲಿಯನ್ ಡಾಲರ್‌ಗಳಷ್ಟು ಮಾರುಕಟ್ಟೆಗೆ ಹರಿದು ಬಂದಿದೆ.
ಏರಿಕೆ ಕಂಡ ಷೇರುಗಳ ಪೈಕಿ ಟಾಟಾ ಪವರ್ ಶೇ.2.93ರಷ್ಟು ಏರಿಕೆ ದಾಖಲಿಸಿ ಮುಂಚೂಣಿಯಲ್ಲಿ ನಿಲ್ಲುತ್ತದೆ. ಐಟಿಸಿ ಷೇರು ಶೇ.2.58ರಷ್ಟು ಜಿಗಿತ ಕಂಡಿದೆ.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು:
ಷೇರುಪೇಟೆ,
ಬಿಎಸ್ಇ,
ನಿಫ್ಟಿ
ಮತ್ತಷ್ಟು
• ಬಿಎಸ್ಇ ಏರಿಕೆ
• ನಿಫ್ಟಿ ಏರಿಕೆ
• ಏರಿಕೆ ದಾಖಲಿಸಿದ ಷೇರುಗಳು
• 32 ತಿಂಗಳಲ್ಲೇ ಭರ್ಜರಿ ಏರಿಕೆ: 20,000 ಗಡಿ ದಾಟಿದ ಸೂಚ್ಯಂಕ
• ಭಾರೀ ಏರಿಕೆ ಕಂಡ ಬಿಎಸ್ಇ
• 6000 ಗಡಿ ದಾಟಿದ ನಿಫ್ಟಿ