ಓಟ ಮುಂದುವರಿಸಿದ ಸೆನ್ಸೆಕ್ಸ್; ಮತ್ತೆ 104 ಪಾಯಿಂಟ್ ಏರಿಕೆ
ಮುಂಬೈ, ಬುಧವಾರ, 22 ಸೆಪ್ಟೆಂಬರ್ 2010( 12:02 IST )
ಮುಂಬೈ ಷೇರು ಮಾರುಕಟ್ಟೆ ಸೂಚ್ಯಂಕ ದಿನದಾರಂಭದ ವಹಿವಾಟಿನಲ್ಲಿ ಮತ್ತೆ ಏರಿಕೆಯ ಓಟವನ್ನು ಮುಂದುವರಿಸಿದೆ.
ಬಿಎಸ್ಇ 30 ಷೇರು ಸೂಚ್ಯಂಕ 103.99 ಪಾಯಿಂಟ್ ಅಂದರೆ ಶೇ.0.51ರಷ್ಟು ಏರಿಕೆ ಕಂಡು 20,105.54ಕ್ಕೆ ತಲುಪಿದೆ. ಆ ಮೂಲಕ 20,000ದ ವಲಯವನ್ನು ಇನ್ನೂ ಕಾಯ್ದುಕೊಂಡಿದೆ.
ರಾಷ್ಟ್ರೀಯ ಷೇರು ಮಾರುಕಟ್ಟೆ ಸೂಚ್ಯಂಕ ನಿಫ್ಟಿ 28.35 ಪಾಯಿಂಟ್ ಅಂದರೆ ಶೇ.0.47ರಷ್ಟು ಏರಿಕೆ ಕಂಡು 6,037.40ಕ್ಕೆ ತಲುಪಿದೆ.
ಹಾಂಗ್‌ಕಾಂಗ್‌ನ ಹ್ಯಾಂಗ್‌ಸೆಂಗ್ ಸೂಚ್ಯಂಕ ಶೇ.0.98ರಷ್ಟು ಏರಿಕೆ ದಾಖಲಿಸಿದೆ. ಜಪಾನಿನ ನಿಕ್ಕಿ ಷೇರು ಸೂಚ್ಯಂಕ ಶೇ.0.03ರಷ್ಟು ಏರಿಕೆ ಕಂಡಿದೆ. ಯುಎಸ್ ಡೋ ಜೋನ್ಸ್ ಇಂಡಸ್ಟ್ರಿಯಲ್ ಅವರೇಜ್ ಕೊಂಚ ಏರುಗತಿಯ ಲಕ್ಷಣ ತೋರುತ್ತಿದೆ.