ಮುಂಬೈ ಷೇರು ಮಾರುಕಟ್ಟೆ ಸೂಚ್ಯಂಕ ಇದೀಗ ಇಳಿಕೆಯ ಹಾದಿಯಲ್ಲಿದೆ. ಇದಕ್ಕೂ ಮೊದಲ ವಹಿವಾಟಿಗಳಲ್ಲಿ ಭರ್ಜರಿ ಏರಿಕೆ ಕಂಡು 20,000ಕ್ಕಿಂತಲೂ ಮೇಲೇರಿದ್ದ ಸೂಚ್ಯಂಕ ನಿನ್ನೆಯ ವಹಿವಾಟಿನಲ್ಲಿ ಕೊಂಚ ಇಳಿಕೆ ಕಂಡಿತ್ತು.
ಬಿಎಸ್ಇ 30 ಷೇರು ಸೂಚ್ಯಂಕ ಈ ದಿನದಾರಂಭದ ವಹಿವಾಟಿನಲ್ಲಿ 86.18 ಪಾಯಿಂಟ್ ಅಂದರೆ ಷೇ.0.43ರಷ್ಟು ಕುಸಿತ ಕಂಡಿದೆ. ಇದಕ್ಕೂ ಮೊದಲ ವಹಿವಾಟಿನಲ್ಲಿ 59.83 ಪಾಯಿಂಟ್ ಇಳಿದಿತ್ತು.
ಇದೇ ವೇಳೆ ರಾಷ್ಟ್ರೀಯ ಷೇರು ಸೂಚ್ಯಂಕ ನಿಫ್ಟಿ 27 ಪಾಯಿಂಟ್ ಅಂದರೆ ಶೇ.0.45ರಷ್ಟು ಕುಸಿದಿದ್ದು 5,964.00ಗೆ ತಲುಪಿದೆ.
ಲಾಭದ ಮುಂಗಡ ಬುಕ್ಕಿಂಗ್ ಈ ರೀತಿಯ ಇಳಿಕೆಗೆ ಕಾರಣವಾಗಿದೆ ಎಂದು ಮಾರುಕಟ್ಟೆ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.