ವಾಣಿಜ್ಯ ಸುದ್ದಿ | ಷೇರುಸೂಚ್ಯಂಕ | ಮಾರುಕಟ್ಟೆ ದರ
ಮುಖ್ಯ ಪುಟ » ಸುದ್ದಿ ಜಗತ್ತು » ವ್ಯವಹಾರ » ಷೇರುಸೂಚ್ಯಂಕ » ಎರಡನೇ ದಿನವೂ ಕುಸಿತ ಕಂಡ ಷೇರು ಮಾರುಕಟ್ಟೆ (Bombay Stock Exchange | Sensex | Nifty)
Bookmark and Share Feedback Print
 
ಮುಂಬೈ ಷೇರು ಮಾರುಕಟ್ಟೆ ಸೂಚ್ಯಂಕ ಎರಡನೇ ದಿನವೂ ಕುಸಿತ ಕಂಡಿದೆ. 20,000ಕ್ಕಿಂತ ಮೇಲೇರಿ ಕುಸಿತ ಕಂಡಿದ್ದ ಸೂಚ್ಯಂಕ ಇಂದು ದಿನದಂತ್ಯದಲ್ಲಿ ಮತ್ತೆ ಕುಸಿದಿದೆ.

ಬಿಎಸ್ಇ 30 ಷೇರು ಸೂಚ್ಯಂಕ ದಿನದಂತ್ಯದ ವಹಿವಾಟಿನಲ್ಲಿ 80.71 ಪಾಯಿಂಟ್ ಕುಸಿತ ಕಂಡು 19,861ಕ್ಕೆ ತಲುಪಿದೆ.

ರಾಷ್ಟ್ರೀಯ ಷೇರು ಮಾರುಕಟ್ಟೆ ಸೂಚ್ಯಂಕ ನಿಫ್ಟಿ ಶೇ.0.52ರಷ್ಟು ಇಳಿಕೆ ಕಂಡು 5,959.55ಕ್ಕೆ ತಲುಪಿದೆ.

ಟೆಲಿಕಾಂ ದೈತ್ಯ ಭಾರ್ತಿ ಏರ್ಟೆಲ್ ಶೇ.1.88ರಷ್ಟು ಕುಸಿತ ಕಂಡರೆ, ರಿಲಯನ್ಸ್ ಕಮ್ಯುನಿಕೇಶನ್ಸ್ ಶೇ.1.24ರಷ್ಟು ಕುಸಿದಿದೆ. ಐಸಿಐಸಿಐ ಬ್ಯಾಂಕ್ ಶೇ.1.65, ಎಚ್‌ಡಿಎಫ್‌ಸಿ ಬ್ಯಾಂಕ್ ಶೇ.0.75, ಎಸ್‌ಬಿಐ ಶೇ.0.23, ಬಿಎಚ್ಇಎಲ್ ಶೇ.0.79ರಷ್ಟು ಕುಸಿದಿದೆ.

ಏರಿಕೆ ಕಂಡ ಷೇರುಗಳ ಪೈಕಿ ಮಹೀಂದ್ರಾ ಅಂಡ್ ಮಹೀಂದ್ರಾ ಶೇ.0.68, ಎಚ್‌ಯುಎಲ್ ಶೇ.0.27, ಇನ್ಫೋಸಿಸ್ ಶೇ.0.19, ಒಎನ್‌ಜಿಸಿ ಶೇ.1.82ರಷ್ಟು ಏರಿಕೆ ಕಂಡಿದೆ.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಷೇರುಪೇಟೆ, ಬಿಎಸ್ಇ, ನಿಫ್ಟಿ