ಮುಂಬೈ ಷೇರು ಮಾರುಕಟ್ಟೆ ಸೂಚ್ಯಂಕ ದಿನದಾರಂಭದ ವಹಿವಾಟಿನಲ್ಲಿ ಸತತ ಮೂರನೇ ದಿನವೂ ಕುಸಿತ ಕಂಡಿದೆ. ಲಾಭದ ಮುಂಗಡ ಬುಕ್ಕಿಂಗ್ ಕಾರಣದಿಂದ 28 ಪಾಯಿಂಟ್‌ಗಳಷ್ಟು ಕುಸಿತ ಕಂಡಿದೆ.
ಬಿಎಸ್ಇ 30 ಷೇರು ಸೂಚ್ಯಂಕ 27.49 ಪಾಯಿಂಟ್ ಕುಸಿತ ಕಂಡು 19.833.52ಕ್ಕೆ ತಲುಪಿದೆ. ಇದಕ್ಕೂ ಮೊದಲ ಎರಡು ವಹಿವಾಟುಗಳಲ್ಲಿ 140 ಪಾಯಿಂಟ್ ಕುಸಿತ ಕಂಡಿತ್ತು.
ರಾಷ್ಟ್ರೀಯ ಷೇರು ಮಾರುಕಟ್ಟೆ ಸೂಚ್ಯಂಕ ನಿಫ್ಟಿ 8.35 ಪಾಯಿಂಟ್ ಕುಸಿತ ಕಂಡು 5,951.55ಕ್ಕೆ ತಲುಪಿದೆ.
ಹಾಂಗ್‌ಕಾಂಗ್‌ನ ಹ್ಯಾಂಗ್‌ಸೆಂಗ್ ಮಾರುಕಟ್ಟೆ ಶೇ.0.07ರಷ್ಟು ಕುಸಿತ ಕಂಡಿದೆ. ಜಪಾನಿನ ನಿಕ್ಕಿ ಷೇರು ಸೂಚ್ಯಂಕ ಶೇ.1.25ರಷ್ಟು ಇಳಿಕೆ ಕಂಡಿದೆ. ಯುಎಸ್‌ನ ಡೋ ಜೋನ್ಸ್ ಇಂಡಸ್ಟ್ರಿಯಲ್ ಅವರೇಜ್ ಶೇ.0.72ರಷ್ಟು ಇಳಿಕೆ ದಾಖಲಿಸಿದೆ.