ಮುಂಬೈ ಷೇರು ಮಾರುಕಟ್ಟೆ ಸೂಚ್ಯಂಕ ದಿನದಂತ್ಯದ ವಹಿವಾಟಿನಲ್ಲಿ ಏರಿಕೆ ದಾಖಲಿಸುವ ಮೂಲಕ ಮತ್ತೆ 20,000ಕ್ಕಿಂತ ಮೇಲೇರಿದೆ.
ಬಿಎಸ್ಇ 30 ಷೇರು ಮಾರುಕಟ್ಟೆ ಸೂಚ್ಯಂಕ 184.17 ಪಾಯಿಂಟ್ ಅಂದರೆ ಶೇ.0.93ರಷ್ಟು ಏರಿಕೆ ಕಂಡು 20,045.18ಕ್ಕೆ ತಲುಪಿದೆ. ಆ ಮೂಲಕ ಎರಡು ದಿನಗಳಲ್ಲಿ ಕಳೆದುಕೊಂಡ ಸ್ಥಾನವನ್ನು ಮರಳಿ ಪಡೆದಂತಾಗಿದೆ.
ರಾಷ್ಟ್ರೀಯ ಷೇರು ಮಾರುಕಟ್ಟೆ ಸೂಚ್ಯಂಕ ನಿಫ್ಟಿ 58.75 ಪಾಯಿಂಟ್ ಏರಿಕೆ ದಾಖಲಿಸಿ 6,018.30ಕ್ಕೆ ತಲುಪಿದೆ.
ಎಚ್‌ಯುಎಲ್, ಐಟಿಸಿ, ಭಾರ್ತಿ ಏರ್ಟೆಲ್, ಒಎನ್‌ಜಿಸಿ, ರಿಯಾಲ್ಟಿ ಹಾಗೂ ಕೆಲವು ಬ್ಯಾಂಕಿಂಗ್ ಷೇರುಗಳು ಉತ್ತಮ ಏರಿಕೆ ದಾಖಲಿಸಿದೆ. ಎಚ್‌ಯುಎಲ್ ಶೇ.3.2ರಷ್ಟು ಏರಿಕೆ ದಾಖಲಿಸಿದರೆ, ಭಾರ್ತಿ ಏರ್ಟೆಲ್ ಶೇ.3, ರಿಲಯನ್ಸ್ ಕಮ್ಯುನಿಕೇಶನ್ಸ್ ಶೇ.1.76ರಷ್ಟು ಏರಿಕೆ ಕಂಡಿದೆ.