ವಾಣಿಜ್ಯ ಸುದ್ದಿ | ಷೇರುಸೂಚ್ಯಂಕ | ಮಾರುಕಟ್ಟೆ ದರ
ಮುಖ್ಯ ಪುಟ » ಸುದ್ದಿ ಜಗತ್ತು » ವ್ಯವಹಾರ » ಷೇರುಸೂಚ್ಯಂಕ » ಬಂಡವಾಳದ ಒಳಹರಿವು; ಮತ್ತೆ ಏರಿಕೆಯತ್ತ ಮುನ್ನುಗ್ಗಿದ ಷೇರುಪೇಟೆ (Bombay Stock Exchange | Sensex | Nifty)
Bookmark and Share Feedback Print
 
ಮುಂಬೈ ಷೇರು ಮಾರುಕಟ್ಟೆ ಸೂಚ್ಯಂಕ ವಾರದ ಆರಂಭದ ವಹಿವಾಟಿನಲ್ಲಿ 222 ಪಾಯಿಂಟ್ ಏರಿಕೆ ಕಾಣುವ ಮೂಲಕ ಈಗಾಗಲೇ 20,000ಕ್ಕಿಂತ ಮೇಲೇರಿದ್ದ ಸೂಚ್ಯಂಕ ಮತ್ತೂ ಏರಿಕೆಯತ್ತ ಮುನ್ನುಗ್ಗಿದೆ. ಏರುತ್ತಿರುವ ಬಂಡವಾಳದ ಒಳಹರಿವು ಹೆಚ್ಚಿರುವ ಕಾರಣದಿಂದ ಜಾಗತಿಕ ಮಾರುಕಟ್ಟೆ ಏರಿದೆ.

ಬಿಎಸ್ಇ 30 ಷೇರು ಸೂಚ್ಯಂಕ 222.80 ಪಾಯಿಂಟ್ ಅಂದರೆ ಶೇ.1.11ರಷ್ಟು ಏರಿಕೆ ದಾಖಲಿಸಿ 20,267.98ಕ್ಕೆ ತಲುಪಿದೆ.

ರಾಷ್ಟ್ರೀಯ ಷೇರು ಮಾರುಕಟ್ಟೆ ಸೂಚ್ಯಂಕ ನಿಫ್ಟಿ ಶೇ.0.73ರಷ್ಟು ಚೇತರಿಕೆ ದಾಖಲಿಸಿ 6,067.35ಕ್ಕೆ ತಲುಪಿದೆ.

ಮೆಟಲ್, ಆಯಿಲ್ ಅಂಡ್ ಗ್ಯಾಸ್ ರಿಯಾಲ್ಟಿ ಹಾಗೂ ಐಟಿ ಷೇರುಗಳು ಉತ್ತಮ ಏರಿಕೆ ಕಂಡಿದ್ದು, ಷೇರು ಮಾರುಕಟ್ಟೆಯ ಚೇತರಿಕೆಗೆ ಕಾರಣವಾಗಿದೆ.

ಅಂತಾರಾಷ್ಟ್ರೀಯ ಮಾರುಕಟ್ಟೆಯ ಪೈಕಿ ಹಾಂಗ್‌ಕಾಂಗ್‌ನ ಹ್ಯಾಂಗ್ ಸೆಂಗ್ ಮಾರುಕಟ್ಟೆ ಶೇ.1.14ರಷ್ಟು ಏರಿಕೆ ದಾಖಲಿಸಿದೆ. ಜಪಾನಿನ ನಿಕ್ಕಿ ಷೇರು ಮಾರುಕಟ್ಟೆ ಸೂಚ್ಯಂಕ ಶೇ.0.90ಯಷ್ಟು ಚೇತರಿದೆ. ಯುಎಸ್‌ನ ಡೋ ಜೋನ್ಸ್ ಇಂಡಸ್ಟ್ರಿಯಲ್ ಅವರೇಜ್ ಶೇ.1.86ರಷ್ಟು ಏರಿಕೆಯನ್ನು ಕಂಡಿದೆ.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಷೇರುಪೇಟೆ, ಬಿಎಸ್ಇ, ನಿಫ್ಟಿ