ಮುಂಬೈ ಷೇರು ಮಾರುಕಟ್ಟೆ ಸೂಚ್ಯಂಕ ದಿನದಾರಂಭದ ವಹಿವಾಟಿನಲ್ಲಿ 12 ಪಾಯಿಂಟ್‌ಗಳಷ್ಟು ಕುಸಿತ ಕಂಡಿದೆ.
ಬಿಎಸ್ಇ 30 ಷೇರು ಮಾರುಕಟ್ಟೆ ಸೂಚ್ಯಂಕ ದಿನದಾರಂಭದ ವಹಿವಾಟಿನಲ್ಲಿ 12.78 ಪಾಯಿಂಟ್ ಅಂದರೆ ಶೇ.0.06ರಷ್ಟು ಕೊಂಚ ಇಳಿಕೆ ಕಂಡು 20,104.60ಕ್ಕೆ ತಲುಪಿದೆ.
ರಾಷ್ಟ್ರೀಯ ಷೇರು ಮಾರುಕಟ್ಟೆ ಸೂಚ್ಯಂಕ ನಿಫ್ಟಿ 7.70 ಪಾಯಿಂಟ್ ಏರಿಕೆ ಕಂಡು 0.12ರಷ್ಟು ಇಳಿಕೆ ಕಂಡು 6,027.95ಕ್ಕೆ ತಲುಪಿದೆ.
ಹಾಂಗ್ ಕಾಂಗ್‌ನ ಹ್ಯಾಂಗ್‌ಸೆಂಗ್ ಮಾರುಕಟ್ಟೆ ಶೇ.1.06ರಷ್ಟು ಇಳಿಕೆ ಕಂಡಿದೆ. ಜಪಾನಿನ ನಿಕ್ಕಿ ಷೇರು ಮಾರುಕಟ್ಟೆ ಸೂಚ್ಯಂಕ ಶೇ.0.61ರಷ್ಟು ಇಳಿಕೆ ಕಂಡಿದೆ. ಯುಎಸ್‌ನ ಡೋ ಜೋನ್ಸ್ ಇಂಡಸ್ಟ್ರಿಯಲ್ ಅವರೇಜ್ ಶೇ.0.44ರಷ್ಟು ಇಳಿಕೆ ಕಂಡಿದೆ.