ಮುಂಬೈ ಷೇರು ಮಾರುಕಟ್ಟೆ ಸೂಚ್ಯಂಕ ದಿನದಾರಂಭದಲ್ಲಿ ಕೊಂಚ ಏರಿಕೆ ದಾಖಲಿಸಿದೆ. 129 ಪಾಯಿಂಟ್ ಏರಿಕೆ ಕಂಡು ಮತ್ತೆ ಏರಿಕೆಯ ಲಕ್ಷಣ ತೋರಿಸಿದೆ.
ಬಿಎಸ್ಇ 30 ಷೇರು ಸೂಚ್ಯಂಕ 129.19 ಪಾಯಿಂಟ್ ಏರಿಕೆ ಕಂಡು 20,234.05ಕ್ಕೆ ತಲುಪಿದೆ. ಇದಕ್ಕೂ ಮೊದಲು 12.52 ಪಾಯಿಂಟ್ ಕುಸಿತ ಕಂಡಿತ್ತು.
ರಾಷ್ಟ್ರೀಯ ಷೇರು ಮಾರುಕಟ್ಟೆ ಸೂಚ್ಯಂಕ ನಿಫ್ಟಿ 42.05 ಪಾಯಿಂಟ್ 6,071.55ಕ್ಕೆ ತಲುಪಿದೆ.
ಹಾಂಗ್ಕಾಂಗ್‌ನ ಹ್ಯಾಂಗ್‌ಸೆಂಗ್ ಮಾರುಕಟ್ಟೆ ಸೂಚ್ಯಂಕ ಶೇ.1.02ರಷ್ಟು ಏರಿಕೆ ಕಂಡಿದೆ. ಜಪಾನಿನ ನಿಕ್ಕಿ ಷೇರು ಮಾರುಕಟ್ಟೆ ಶೇ.0.38ರಷ್ಟು ಏರಿದೆ. ಯುಎಸ್‌ನ ಡೋ ಜೋನ್ಸ್ ಇಂಡಸ್ಟ್ರಿಯಲ್ ಅವರೇಜ್ ಶೇ.0.43ರಷ್ಟು ಏರಿಕೆ ಕಂಡಿದೆ.