ವಾಣಿಜ್ಯ ಸುದ್ದಿ | ಷೇರುಸೂಚ್ಯಂಕ | ಮಾರುಕಟ್ಟೆ ದರ
ಮುಖ್ಯ ಪುಟ » ಸುದ್ದಿ ಜಗತ್ತು » ವ್ಯವಹಾರ » ಷೇರುಸೂಚ್ಯಂಕ » ಸೆನ್ಸೆಕ್ಸ್: ಆರಂಭಿಕ ವಹಿವಾಟಿನಲ್ಲಿ ಕುಸಿತದತ್ತ ಸೂಚ್ಯಂಕ (Sensex | Slump | Nifty | Hang Seng)
Bookmark and Share Feedback Print
 
ಜಾಗತಿಕ ಮಾರುಕಟ್ಟೆಗಳ ದುರ್ಬವ ವಹಿವಾಟಿನ ಮಧ್ಯೆ ಶೇರುಗಳ ಮಾರಾಟದ ಒತ್ತಡ ಹೆಚ್ಚಿದ ಹಿನ್ನೆಲೆಯಲ್ಲಿ, ಶೇರುಪೇಟೆಯ ಸೂಚ್ಯಂಕ 39 ಪಾಯಿಂಟ್‌ಗಳ ಕುಸಿತ ಕಂಡು 19,917.38 ಅಂಕಗಳಿಗೆ ತಲುಪಿದೆ.

ಬಿಎಸ್‌ಇ-30 ಸೂಚ್ಯಂಕ ಹಿಂದಿನ ದಿನದ ವಹಿವಾಟಿನ ಮುಕ್ತಾಯಕ್ಕೆ 148.52 ಪಾಯಿಂಟ್‌ಗಳ ಇಳಿಕೆ ಕಂಡಿತ್ತು. ಇಂದಿನ ಆರಂಭಿಕ ವಹಿವಾಟಿನಲ್ಲಿ ಮತ್ತೆ 38.96 ಪಾಯಿಂಟ್‌ಗಳ ಕುಸಿತ ಕಂಡಿದೆ.

ರಾಷ್ಟ್ರೀಯ ಮಾರುಕಟ್ಟೆ ನಿಫ್ಟಿ ಸೂಚ್ಯಂಕ, ಇಂದಿನ ಆರಂಭಿಕ ವಹಿವಾಟಿನಲ್ಲಿ 6.05 ಪಾಯಿಂಟ್‌ಗಳ ಕುಸಿತ ಕಂಡು 5,985.25 ಅಂಕಗಳಿಗೆ ತಲುಪಿದೆ.

ಏತನ್ಮಧ್ಯೆ, ಅಮೆರಿಕದ ಶೇರುಪೇಟೆಯಲ್ಲಿ ಹೂಡಿಕೆಯ ಕೊರತೆಯ ವರದಿಗಳಿಂದಾಗಿ, ಏಷ್ಯಾದ ಮಾರುಕಟ್ಟೆ ಕುಸಿತಕ್ಕೆ ಕಾರಣವಾಗಿದೆ ಎಂದು ಮಾರುಕಟ್ಟೆಯ ಮೂಲಗಳು ತಿಳಿಸಿವೆ.

ಹಾಂಗ್‌ಕಾಂಗ್‌ನ ಹಾಂಗ್‌ಸೆಂಗ್ ಶೇರುಪೇಟೆ ಆರಂಭಿಕ ವಹಿವಾಟಿನಲ್ಲಿ ಶೇ.0.09ರಷ್ಟು ಕುಸಿತ ಕಂಡಿದ್ದರೇ ಜಪಾನ್‌ನ ನಿಕ್ಕಿ ಮಾರುಕಟ್ಟೆ ಶೇ.0.41ರಷ್ಟು ಕುಸಿತ ಕಂಡಿದೆ.

ಅಮೆರಿಕದ ಡೊ ಜೊನ್ಸ್ ಶೇರುಪೇಟೆ, ವಹಿವಾಟಿನ ಮುಕ್ತಾಯಕ್ಕೆ ಶೇ.0.21ರಷ್ಟು ಕುಸಿತ ಕಂಡಿದೆ.
ಸಂಬಂಧಿತ ಮಾಹಿತಿ ಹುಡುಕಿ