ವಾಣಿಜ್ಯ ಸುದ್ದಿ | ಷೇರುಸೂಚ್ಯಂಕ | ಮಾರುಕಟ್ಟೆ ದರ
ಮುಖ್ಯ ಪುಟ » ಸುದ್ದಿ ಜಗತ್ತು » ವ್ಯವಹಾರ » ಷೇರುಸೂಚ್ಯಂಕ » ಶೇರುಪೇಟೆಯಲ್ಲಿ ಮುಂದುವರಿದ ಖರೀದಿಯ ಭರಾಟೆ (Stock exchange | Sensex | Nifty)
Bookmark and Share Feedback Print
 
ಶೇರುಪೇಟೆಯ ವಹಿವಾಟಿನ ಮುಕ್ತಾಯಕ್ಕೆ ಎಲ್ಲಾ ಕ್ಷೇತ್ರಗಳ ಶೇರುಗಳ ವಹಿವಾಟಿನಲ್ಲಿ ಏರಿಕೆಯಾಗಿದ್ದರಿಂದ, ಶೇರುಪೇಟೆ ಸೂಚ್ಯಂಕ 225 ಪಾಯಿಂಟ್‌ಗಳ ಏರಿಕೆ ಕಂಡಿದೆ.

ವಹಿವಾಟು ಆರಂಭವಾದ ಕೇವಲ ಕೆಲವೇ ನಿಮಿಷಗಳಲ್ಲಿ 115 ಪಾಯಿಂಟ್‌ಗಳ ಏರಿಕೆ ಕಂಡಿದ್ದ ಬಿಎಸ್‌ಇ ಸೂಚ್ಯಂಕ, ವಹಿವಾಟಿನ ಮುಕ್ತಾಯಕ್ಕೆ 225.35 ಪಾಯಿಂಟ್‌ಗಳ ಏರಿಕೆ ಕಂಡು 20,294.47 ಅಂಕಗಳಿಗೆ ತಲುಪಿದೆ.

ರಾಷ್ಟ್ರೀಯ ಮಾರುಕಟ್ಟೆ ನಿಫ್ಟಿ ಸೂಚ್ಯಂಕ ಕೂಡಾ, ವಹಿವಾಟಿನ ಮುಕ್ತಾಯಕ್ಕೆ 63.75 ಪಾಯಿಂಟ್‌ಗಳ ಏರಿಕೆ ಕಂಡು 6,093.70 ಪಾಯಿಂಟ್‌ಗಳಿಗೆ ತಲುಪಿದೆ.

ಅಮೆರಿಕ ಮತ್ತು ಚೀನಾದಿಂದ ಬೇಡಿಕೆಗಳಲ್ಲಿ ಹೆಚ್ಚಳವಾಗುವ ಸಾಧ್ಯತೆಗಳಿವೆ ಎನ್ನುವ ವರದಿಗಳ ಹಿನ್ನೆಲೆಯಲ್ಲಿ, ವಾಹನೋದ್ಯಮ ಮತ್ತು ಉಕ್ಕು ಕ್ಷೇತ್ರದ ಸೇರುಗಳು ವಹಿವಾಟಿನಲ್ಲಿ ಭಾರಿ ಚೇತರಿಕೆ ಕಂಡಿವೆ.

ಏತನ್ಮಧ್ಯೆ, ಇಂಡೋನೇಷ್ಯಾ, ಜಪಾನ್, ದಕ್ಷಿಣ ಕೊರಿಯಾ, ಸಿಂಗಾಪೂರ್ ಮತ್ತು ತೈವಾನ್ ಶೇರುಪೇಟೆಗಳು ಶೇ.0.11ರಷ್ಟು ಏರಿಕೆ ಕಂಡಿವೆ.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಶೇರುಪೇಟೆ, ಸೆನ್ಸೆಕ್ಸ್, ನಿಫ್ಟಿ