ವಿದೇಶಿ ಬಂಡವಾಳದ ಒಳಹರಿವು ಹಾಗೂ ಏಷ್ಯಾ ಮಾರುಕಟ್ಟೆಗಳ ಸ್ಥಿರ ವಹಿವಾಟಿನಿಂದಾಗಿ ಇಂದಿನ ಆರಂಭಿಕ ವಹಿವಾಟಿನಲ್ಲಿ ಶೇರುಪೇಟೆ ಸೂಚ್ಯಂಕ, 33 ತಿಂಗಳ ಗರಿಷ್ಠ ಏರಿಕೆ ಕಂಡಿದೆ.
ವಾಹನೋದ್ಯಮ ,ಉಕ್ಕು, ತೈಲ ಮತ್ತು ಅನಿಲ ಕ್ಷೇತ್ರಗಳ ಶೇರುಗಳ ಖರೀದಿಯ ಹೆಚ್ಚಳದಿಂದಾಗಿ, ಬಿಎಸ್‌ಇ-30 ಸೂಚ್ಯಂಕ ಇಂದಿನ ಆರಂಭಿಕ ವಹಿವಾಟಿನಲ್ಲಿ 187.76 ಪಾಯಿಂಟ್‌ಗಳ ಏರಿಕೆ ಕಂಡು 20,632.80 ಅಂಕಗಳಿಗೆ ತಲುಪಿದೆ.
ಶೇರುಪೇಟೆಯ ಎಲ್ಲಾ ಕ್ಷೇತ್ರಗಳು ಶೇರುಗಳು ಖರೀದಿಯ ಭರಾಟೆಯಲ್ಲಿ ಮುಂದುವರಿದಿದ್ದು, ವಹಿವಾಟಿನಲ್ಲಿ ಶೇ.1.30 ರಷ್ಟು ಏರಿಕೆ ಕಂಡಿದೆ.
ಅದರಂತೆ, ರಾಷ್ಟ್ರೀಯ ಮಾರುಕಟ್ಟೆ ನಿಫ್ಟಿ ಸೂಚ್ಯಂಕ, ಆರಂಭಿಕ ವಹಿವಾಟಿನಲ್ಲಿ 58.20 ಪಾಯಿಂಟ್‌ಗಳ ಏರಿಕೆ ಕಂಡು 6,200 ಅಂಕಗಳಿಗೆ ತಲುಪಿದೆ.
ದೇಶಿಯ ಮಾರುಕಟ್ಟೆಯಲ್ಲಿ ವಿದೇಶಿ ಬಂಡವಾಳದ ಒಳಹರಿವು ಹೆಚ್ಚಳಾದ ಹಿನ್ನೆಲೆಯಲ್ಲಿ, ಶೇರುಪೇಟೆ ಚೇತರಿಕೆಯತ್ತ ವೇಗವಾಗಿ ಸಾಗಿದೆ ಎಂದು ಮಾರುಕಟ್ಟೆಯ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.