ಚಿಲ್ಲರೆ ಹೂಡಿಕೆದಾರರು ಹಾಗೂ ಇತರ ಕಂಪೆನಿಗಳಿಂದ ಶೇರುಗಳ ಖರೀದಿಯಲ್ಲಿ ಹೆಚ್ಚಳವಾಗಿದ್ದರಿಂದ, ಶೇರುಪೇಟೆ ಸೂಚ್ಯಂಕ 33 ತಿಂಗಳ ಗರಿಷ್ಠ ಏರಿಕೆ ಕಂಡು 31ಪಾಯಿಂಟ್‌ಗಳಿಗೆ ತಲುಪಿದೆ.
ಬಿಎಸ್‌ಇ-30 ಸೂಚ್ಯಂಕ ವಹಿವಾಟಿನ ಮುಕ್ತಾಯಕ್ಕೆ 30.69 ಪಾಯಿಂಟ್‌ಗಳ ಏರಿಕೆ ಕಂಡು 33 ತಿಂಗಳ ಗರಿಷ್ಠ ಏರಿಕೆಯಾಗಿ 20,475.73 ಅಂಕಗಳಿಗೆ ತಲುಪಿದೆ.
ರಾಷ್ಟ್ರೀಯ ಮಾರುಕಟ್ಟೆ ನಿಫ್ಟಿ ಸೂಚ್ಯಂಕ ಕೂಡಾ, 33 ತಿಂಗಳ ಅವಧಿಯಲ್ಲಿ ಮೊದಲ ಬಾರಿಗೆ 6200 ಅಂಕಗಳ ಗಡಿಯನ್ನು ದಾಟಿದೆ. ಇಂದಿನ ಆರಂಭಿಕ ವಹಿವಾಟಿನ ಅಂತ್ಯಕ್ಕೆ 16.05ಪಾಯಿಂಟ್‌ಗಳ ಏರಿಕೆ ಕಂಡು 6,159.45 ಅಂಕಗಳಿಗೆ ತಲುಪಿದೆ.
ಶೇರುಪೇಟೆಯಲ್ಲಿ ಐಸಿಐಸಿಐ ಬ್ಯಾಂಕ್ ಮತ್ತು ರಿಲಯನ್ಸ್ ಇಂಡಸ್ಟ್ರೀಸ್ ಶೇರುಗಳು ಕ್ರಮವಾಗಿ ಶೇ.2ರಷ್ಟು ಹಾಗೂ ಶೇ.1ರಷ್ಟು ಏರಿಕೆ ಕಂಡಿವೆ.ಟಾಟಾ ಮೋಟಾರ್ಸ್ ಶೇರುಗಳು ವಹಿವಾಟಿನ ಮುಕ್ತಾಯಕ್ಕೆ ಶೇ.1.85ರಷ್ಟು ಏರಿಕೆ ಕಂಡಿವೆ.
ಹೆಲ್ತ್‌ಕೇರ್ ಸೂಚ್ಯಂಕ ಶೇ.1.69 ರಷ್ಟು ಏರಿಕೆಯಾಗಿದೆ.ಗೃಹೋಪಕರಣ ಕ್ಷೇತ್ರ(ಶೇ.1.47) ಬ್ಯಾಂಕಿಂಗ್ ಕ್ಷೇತ್ರ ಶೇ.0.79 ರಷ್ಟು ಚೇತರಿಕೆ ಕಂಡಿದೆ. ವಾಹನೋದ್ಯಮ ಕ್ಷೇತ್ರದ ಶೇರುಗಳು ಶೇ.0.63 ರಷ್ಟು ಏರಿಕೆ ಕಂಡಿದೆ.