ವಾಣಿಜ್ಯ ಸುದ್ದಿ | ಷೇರುಸೂಚ್ಯಂಕ | ಮಾರುಕಟ್ಟೆ ದರ
ಮುಖ್ಯ ಪುಟ » ಸುದ್ದಿ ಜಗತ್ತು » ವ್ಯವಹಾರ » ಷೇರುಸೂಚ್ಯಂಕ » ಸೆನ್ಸೆಕ್ಸ್: ಅಲ್ಪ ಕುಸಿತ ಕಂಡ ಶೇರುಪೇಟೆ (Sensex | Banking sector | Loses | Profit booking)
Bookmark and Share Feedback Print
 
ಶೇರುಪೇಟೆಯ ವಹಿವಾಟಿನ ಮುಕ್ತಾಯಕ್ಕೆ ಶೇರುಗಳ ಮಾರಾಟದ ಭರಾಟೆಯಿಂದಾಗಿ 33 ತಿಂಗಳ ಗರಿಷ್ಠ 68 ಪಾಯಿಂಟ್‌ಗಳ ಇಳಿಕೆ ಕಂಡಿದೆ.

ಬಿಎಸ್‌ಇ-30 ಸೂಚ್ಯಂಕ, ವಹಿವಾಟಿನ ಮುಕ್ತಾಯಕ್ಕೆ 68.02 ಪಾಯಿಂಟ್‌ಗಳ ಇಳಿಕೆ ಕಂಡು 20,407.71 ಅಂಕಗಳಿಗೆ ತಲುಪಿದೆ.

ಅದರಂತೆ, ರಾಷ್ಟ್ರೀಯ ಮಾರುಕಟ್ಟೆ ನಿಫ್ಟಿ ಸೂಚ್ಯಂಕ ಕೂಡಾ 13.65ಪಾಯಿಂಟ್‌ಗಳ ಕುಸಿತ ಕಂಡು 6,145.80 ಅಂಕಗಳಿಗೆ ತಲುಪಿದೆ.

ಬ್ಯಾಂಕಿಂಗ್ ಕ್ಷೇತ್ರ ಉಕ್ಕು ಸೇರಿದಂತೆ ಹಲವು ಕ್ಷೇತ್ರಗಳ ಶೇರುಗಳ ಮಾರಾಟದಿಂದಾಗಿ ವಹಿವಾಟಿನಲ್ಲಿ ಭಾರಿ ಕುಸಿತವಾಗಿದೆ ಎಂದು ಬ್ರೋಕರ್‌ಗಳು ತಿಳಿಸಿದ್ದಾರೆ.

ಬ್ಯಾಂಕಿಂಗ್ ಕ್ಷೇತ್ರದ ಎಚ್‌ಡಿಎಫ್‌ಸಿ ಬ್ಯಾಂಕ್ ಮತ್ತು ಐಸಿಐಸಿ ಬ್ಯಾಂಕ್ ಶೇರುಗಳು ಕ್ರಮವಾಗಿ ಶೇ.1.80 ಮತ್ತು ಶೇ.0.30ರಷ್ಟು ಕುಸಿತ ಕಂಡಿವೆ.

ರಿಲಯನ್ಸ್ ಇಂಡಸ್ಟ್ರೀಸ್ , ಇನ್ಫೋಸಿಸ್ ಟೆಕ್ನಾಲಾಜೀಸ್ ಶೇರುಗಳು ವಹಿವಾಟಿನ ಮುಕ್ತಾಯಕ್ಕೆ ಚೇತರಿಕೆ ಕಂಡಿವೆ.
ಸಂಬಂಧಿತ ಮಾಹಿತಿ ಹುಡುಕಿ