ವಾಣಿಜ್ಯ ಸುದ್ದಿ | ಷೇರುಸೂಚ್ಯಂಕ | ಮಾರುಕಟ್ಟೆ ದರ
ಮುಖ್ಯ ಪುಟ » ಸುದ್ದಿ ಜಗತ್ತು » ವ್ಯವಹಾರ » ಷೇರುಸೂಚ್ಯಂಕ » ಕೊಂಚ ಏರಿಕೆ ಕಂಡ ಷೇರು ಮಾರುಕಟ್ಟೆ (Bombay Stock Exchange | Sensex | Nifty)
Bookmark and Share Feedback Print
 
ಮುಂಬೈ ಷೇರು ಮಾರುಕಟ್ಟೆ ಸೂಚ್ಯಂಕ ದಿನದಾರಂಭದಲ್ಲಿ ಕೊಂಚ ಏರಿಕೆ ಕಂಡು ವ್ಯವಹಾರ ಗರಿಗೆದರಿದೆ.

ಬಿಎಸ್ಇ 30 ಷೇರು ಸೂಚ್ಯಂಕ 38.21 ಪಾಯಿಂಟ್ ಅಂದರೆ ಶೇ.0.18ರಷ್ಟು ಏರಿಕೆ ದಾಖಲಿಸಿ 20,581.29ಕ್ಕೆ ತಲುಪಿದೆ. ಆಯಿಲ್ ಅಂಡ್ ಗ್ಯಾಸ್, ಮೆಟಲ್ ಷೇರುಗಳು ಉತ್ತಮ ಏರಿಕೆಯತ್ತ ಮುನ್ನುಗ್ಗಿದ್ದು, ಇದಕ್ಕೂ ಮೊದಲ ವಹಿವಾಟಿನಲ್ಲಿ 135 ಪಾಯಿಂಟ್ ಏರಿಕೆಯಾಗಿತ್ತು.

ರಾಷ್ಟ್ರೀಯ ಷೇರು ಮಾರುಕಟ್ಟೆ ಸೂಚ್ಯಂಕ ನಿಫ್ಟಿ ಶೇ.11.35ರಷ್ಟು ಅಂದರೆ ಶೇ.0.15ರಷ್ಟು ಏರಿಕೆ ದಾಖಲಿಸಿ 6,197.80ಕ್ಕೆ ತಲುಪಿದೆ.

ಏಷ್ಯನ್ ಮಾರುಕಟ್ಟೆ ಪೈಕಿ ಹಾಂಗ್‌ಕಾಂಗ್‌ನ ಹ್ಯಾಂಗ್‌ಸೆಂಗ್ ಮಾರುಕಟ್ಟೆ ಶೇ.0.28ರಷ್ಟು ಏರಿಕೆ ಕಂಡರೆ, ಜಪಾನಿನ ನಿಕ್ಕಿ ಷೇರು ಸೂಚ್ಯಂಕ ಶೇ.0.31ರಷ್ಟು ಏರಿಕೆ ದಾಖಲಿಸಿದೆ. ಯುಎಸ್‌ನ ಡೋ ಜೋನ್ಸ್ ಇಂಡಸ್ಟ್ರಿಯಲ್ ಅವರೇಜ್ ಶೇ.0.21ರಷ್ಟು ಚೇತರಿಕೆ ದಾಖಲಿಸಿದೆ.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಷೇರುಪೇಟೆ, ಬಿಎಸ್ಇ, ನಿಫ್ಟಿ