ವಾಣಿಜ್ಯ ಸುದ್ದಿ | ಷೇರುಸೂಚ್ಯಂಕ | ಮಾರುಕಟ್ಟೆ ದರ
ಮುಖ್ಯ ಪುಟ » ಸುದ್ದಿ ಜಗತ್ತು » ವ್ಯವಹಾರ » ಷೇರುಸೂಚ್ಯಂಕ » ದಿಢೀರ್ ಭಾರೀ ಇಳಿಕೆ ದಾಖಲಿಸಿದ ಷೇರುಪೇಟೆ (Bombay Stock Exchange | Sensex | Nifty)
Bookmark and Share Feedback Print
 
ಮುಂಬೈ ಷೇರು ಮಾರುಕಟ್ಟೆ ಸೂಚ್ಯಂಕ ದಿನದಂತ್ಯದ ವಹಿವಾಟಿನಲ್ಲಿ ಭಾರೀ ಇಳಿಕೆ ಕಂಡಿದೆ. 228 ಪಾಯಿಂಟ್ ಕುಸಿತ ಕಾಣುವ ಮೂಲಕ ಇಳಿಕೆಯೆಡೆಗೆ ಧಾವಿಸಿದೆ.

ಬಿಎಸ್ಇ 30 ಷೇರು ಮಾರುಕಟ್ಟೆ ಸೂಚ್ಯಂಕ ದಿನದಂತ್ಯದ ವಹಿವಾಟಿನಲ್ಲಿ 227.76 ಪಾಯಿಂಟ್ ಇಳಿಕೆ ಕಂಡು 20,315.32ಕ್ಕೆ ತಲುಪಿದೆ. ಇದಕ್ಕೂ ಮೊದಲ ವಹಿವಾಟಿನಲ್ಲಿ 135.37 ಪಾಯಿಂಟ್ ಏರಿಕೆ ದಾಖಲಿಸಿತ್ತು.

ರಾಷ್ಟ್ರೀಯ ಷೇರು ಮಾರುಕಟ್ಟೆ ಸೂಚ್ಯಂಕ ನಿಫ್ಟಿ 66.15 ಪಾಯಿಂಟ್ ಕುಸಿತ ಕಂಡು 6,120.30ಕ್ಕೆ ತಲುಪಿದೆ.

ಬಿಎಸ್ಇ 30 ಷೇರುಗಳ ಪೈಕಿ 17 ಷೇರುಗಳು ಇಳಿಕೆ ಕಂಡರೆ, 13 ಷೇರುಗಳು ಏರಿಕೆ ದಾಖಲಿಸಿವೆ. ರಿಯಾಲ್ಟಿ ಷೇರು ವಲಯ ಶೇ.2.80ಯಷ್ಟು ಇಳಿಕೆ ಕಂಡಿದೆ. ಐಟಿ ವಲಯ ಶೇ.1.30ಯಷ್ಟು ಚೇತರಿಸಿದೆ.

ಏಷ್ಯನ್ ಷೇರು ಮಾರುಕಟ್ಟೆಯೂ ಇಳಿಕೆಯೆಡೆಗೆ ಸಾಗಿದೆ. ಸಿಂಗಾಪುರ, ಸೌತ್ ಕೊರಿಯಾ, ಜಪಾನ್ ಷೇರು ಸೂಚ್ಯಂಕಗಳು ಶೇ.0.07ರಷ್ಟು ಇಳಿಕೆ ಕಂಡಿದೆ. ಹಾಂಗ್‌ಕಾಂಗ್‌ನ ಹ್ಯಾಂಗ್‌ಸೆಂಗ್ ಷೇರುಪೇಟೆ ಶೇ.0.02ರಷ್ಟು ಏರಿದೆ.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಷೇರುಪೇಟೆ, ಬಿಎಸ್ಇ, ನಿಫ್ಟಿ