ಬಿಎಸ್ಇ 30 ಷೇರು ಸೂಚ್ಯಂಕ ದಿನದಾರಂಭದಲ್ಲಿ 92.30 ಪಾಯಿಂಟ್ ಅಂದರೆ ಶೇ.0.45ರಷ್ಟು ಏರಿಕೆ ದಾಖಲಿಸಿ 20,407.62ಕ್ಕೆ ತಲುಪಿದೆ. ಮೆಟಲ್, ಬ್ಯಾಂಕಿಂಗ್ ಹಾಗೂ ರಿಯಾಲ್ಟಿ ಷೇರು ಮಾರುಕಟ್ಟೆ ಉತ್ತಮ ಚೇತರಿಕೆ ಕಂಡ ಫಲವಾಗಿ ಷೇರುಪೇಟೆ ಮತ್ತೆ ಚಿಗಿತುಕೊಂಡಿದೆ. ಇದಕ್ಕೂ ಮೊದಲ ವಹಿವಾಟಿನಲ್ಲಿ 227.76 ಪಾಯಿಂಟ್ ಕುಸಿತ ಕಂಡಿತ್ತು.