ಮುಂಬೈ ಷೇರು ಮಾರುಕಟ್ಟೆ ಸೂಚ್ಯಂಕ ದಿನದಾರಂಭದ ವಹಿವಾಟಿನಲ್ಲಿ 92 ಪಾಯಿಂಟ್ ಏರಿಕೆ ಕಂಡಿದೆ.
ಬಿಎಸ್ಇ 30 ಷೇರು ಸೂಚ್ಯಂಕ ದಿನದಾರಂಭದಲ್ಲಿ 92.30 ಪಾಯಿಂಟ್ ಅಂದರೆ ಶೇ.0.45ರಷ್ಟು ಏರಿಕೆ ದಾಖಲಿಸಿ 20,407.62ಕ್ಕೆ ತಲುಪಿದೆ. ಮೆಟಲ್, ಬ್ಯಾಂಕಿಂಗ್ ಹಾಗೂ ರಿಯಾಲ್ಟಿ ಷೇರು ಮಾರುಕಟ್ಟೆ ಉತ್ತಮ ಚೇತರಿಕೆ ಕಂಡ ಫಲವಾಗಿ ಷೇರುಪೇಟೆ ಮತ್ತೆ ಚಿಗಿತುಕೊಂಡಿದೆ. ಇದಕ್ಕೂ ಮೊದಲ ವಹಿವಾಟಿನಲ್ಲಿ 227.76 ಪಾಯಿಂಟ್ ಕುಸಿತ ಕಂಡಿತ್ತು.
ರಾಷ್ಟ್ರೀಯ ಷೇರು ಮಾರುಕಟ್ಟೆ ಸೂಚ್ಯಂಕ ನಿಫ್ಟಿ 28.30 ಪಾಯಿಂಟ್ ಅಂದರೆ ಶೇ.0.32ರಷ್ಟು ಏರಿಕೆ ದಾಖಲಿಸಿ 6,148.60ಕ್ಕೆ ತಲುಪಿದೆ.
ಏಷ್ಯನ್ ಷೇರು ಮಾರುಕಟ್ಟೆ ಪೈಕಿ ಹಾಂಗ್‌ಕಾಂಗ್‌ನ ಹ್ಯಾಂಗ್‌ಸೆಂಗ್ ಮಾರುಕಟ್ಟೆ ಶೇ.0.13ರಷ್ಟು ಏರಿದೆ. ಜಪಾನೀ ಷೇರುಪೇಟೆ ನಿಕ್ಕಿ ಶೇ.0.10ರಷ್ಟು ಇಳಿಕೆ ಕಂಡಿದೆ. ಯುಎಸ್‌ನ ಡೋ ಜೋನ್ಸ್ ಇಂಡಸ್ಟ್ರಿಯಲ್ ಅವರೇಜ್ ಶೇ.0.17ರಷ್ಟು ಇಳಿಕೆ ಕಂಡಿದೆ.