ಮುಂಬೈ ಷೇರು ಮಾರುಕಟ್ಟೆ ಸೂಚ್ಯಂಕ ದಿನದಂತ್ಯದ ವಹಿವಾಟಿನಲ್ಲಿ ಮತ್ತೆ ಕುಸಿತದತ್ತ ಮುಖ ಮಾಡಿದೆ.
ಬಿಎಸ್ಇ 30 ಷೇರು ಮಾರುಕಟ್ಟೆ ಸೂಚ್ಯಂಕ 65.06 ಪಾಯಿಂಟ್ ಅಂದರೆ ಶೇ.0.32ರಷ್ಟು ಇಳಿಕೆ ಕಂಡು 20,250.26ಕ್ಕೆ ತಲುಪಿದೆ. ಇದಕ್ಕೂ ಮೊದಲ ವಹಿವಾಟಿನಲ್ಲಿ 227 ಪಾಯಿಂಟ್ ಇಳಿಕೆ ಕಂಡಿತ್ತು.
ರಾಷ್ಟ್ರೀಯ ಷೇರು ಮಾರುಕಟ್ಟೆ ಸೂಚ್ಯಂಕ ನಿಫ್ಟಿ 16.85 ಪಾಯಿಂಟ್ ಇಳಿಕೆ ಕಂಡು 6,103.03ಕ್ಕೆ ತಲುಪಿದೆ.
ಬಿಎಸ್ಇ 30 ಷೇರುಗಳ ಪೈಕಿ 20 ಷೇರುಗಳು ಇಳಿಕೆ ಕಂಡಿತ್ತು 10 ಷೇರುಗಳು ಏರಿಕೆಯತ್ತ ಸಾಗಿದೆ.
ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ 9.75 ರೂಪಾಯಿ ಏರಿಕೆ ಕಂಡರೆ, ಇನ್ಫೋಸಿಸ್ 22.15 ರೂಪಾಯಿಗಳಷ್ಟು ಏರಿದೆ. ಎಚ್‌ಡಿಎಫ್‌ಸಿ ಬ್ಯಾಂಕ್ 28.65 ರೂಪಾಯಿ ಇಳಿದಿದೆ. ಬಿಎಚ್‌ಇಎಲ್ 23.35 ರೂಪಾಯಿ ಇಳಿಕೆ ಕಂಡಿದೆ.