ಅಂತಾರಾಷ್ಟ್ರೀಯ ಷೇರು ಮಾರುಕಟ್ಟೆಯಲ್ಲಿ ಏರಿಳಿತ ಕಂಡಿದೆ. ನಾಸ್ಡಾಕ್ ಕಾಂಪೋಸಿಟ್ ಶೇ.0.77ರಷ್ಟು ಏರಿಕೆ ಕಂಡರೆ, ಡೋ ಜೋನ್ಸ್ ಇಂಡಸ್ಟ್ರಿಯಲ್ ಅವರೇಜ್ ಶೇ.0.53ರಷ್ಟು ಏರಿಕೆ ದಾಖಲಿಸಿದೆ.
ಯುರೋಪಿನ ಷೇರು ಪೇಟೆಯಲ್ಲೂ ಸಾಕಷ್ಟು ಏರಿಳಿತ ದಾಖಲಾಗಿದೆ. ಎಫ್‌ಟಿಎಸ್ಇ 250 ಷೇರು ಪೇಟೆ ಶೇ.0.38ರಷ್ಟು ಇಳಿಕೆ ಕಂಡಿದೆ.
ಏಷ್ಯನ್ ಷೇರು ಮಾರುಕಟ್ಟೆ ಇಳಿಮುಖದೆಡೆಗೆ ಸಾಗುತ್ತಿದೆ. ಜಪಾನಿನ ನಿಕ್ಕಿ 225 ಷೇರುಪೇಟೆ ಶೇ.0.99ರಷ್ಟು ಇಳಿಕೆ ಕಂಡಿದೆ. ಹಾಂಗ್‍ಕಾಂಗ್‌ನ ಹ್ಯಾಂಗ್‌ಸೆಂಗ್ ಮಾರುಕಟ್ಟೆ ಶೇ.0.26ರಷ್ಟು ಏರಿಕೆಯಾಗಿದೆ.