ವಾಣಿಜ್ಯ ಸುದ್ದಿ | ಷೇರುಸೂಚ್ಯಂಕ | ಮಾರುಕಟ್ಟೆ ದರ
ಮುಖ್ಯ ಪುಟ » ಸುದ್ದಿ ಜಗತ್ತು » ವ್ಯವಹಾರ » ಷೇರುಸೂಚ್ಯಂಕ » ವಾರದಲ್ಲಿ 195 ಪಾಯಿಂಟ್ ಕುಸಿತ ಕಂಡ ಷೇರುಪೇಟೆ (Sensex)
Bookmark and Share Feedback Print
 
ವಾರದಲ್ಲಿ ಷೇರು ಮಾರುಕಟ್ಟೆ ಸೂಚ್ಯಂಕ 195 ಪಾಯಿಂಟ್ ಕುಸಿತ ಕಂಡು ತನ್ನ ಐದು ವಾರಗಳಲ್ಲಿ ಪಡೆದ ಏರುಗತಿಯನ್ನು ಕುಗ್ಗಿಸಿಕೊಂಡಿದೆ.

ಬಿಎಸ್ಇ 30 ಷೇರು ಮಾರುಕಟ್ಟೆ ವಾರಾಂತ್ಯದಲ್ಲಿ ಒಟ್ಟು 194.78 ಪಾಯಿಂಟ್ ಅಂದರೆ ಶೇ.0.95ರಷ್ಟು ಇಳಿಕೆ ಕಂಡು 20,250.26ಕ್ಕೆ ತಲುಪಿದೆ.

ನಿಫ್ಟಿ 39.95 ಪಾಯಿಂಟ್ ಅಂದರೆ ಶೇ.0.65ರಷ್ಟು ಇಳಿಕೆ ಕಂಡು 6,103.45ಕ್ಕೆ ತಲುಪಿದೆ.

ಇಳಿಕೆ ಕಂಡ ಷೇರುಗಳ ಪೈಕಿ ಹಿಂದೂಸ್ತಾನ್ ಯುನಿಲಿವರ್ ಶೇ.4.50ರಷ್ಟು ಇಳಿಕೆ ಕಂಡಿದೆ. ಎಚ್‌ಡಿಎಫ್‌ಸಿ ಬ್ಯಾಂಕ್ ಶೇ.3.84, ಭಾರ್ತಿ ಏರ್ಟೆಲ್ ಶೇ.3.78, ಐಟಿಸಿ ಶೇ.3.79, ಎಚ್‌ಡಿಎಫ್‌ಸಿ ಶೇ.3.24, ಒಎನ್‌ಜಿಸಿ ಶೇ.3.13, ಎಲ್ಎಂಡ್‌ಟಿ ಶೇ.2.71ರಷ್ಟು ಕುಸಿದಿದೆ.

ಆದರೂ, ರಿಲಯನ್ಸ್ ಕಮ್ಯುನಿಕೇಶನ್ಸ್ ಉತ್ತಮವಾಗಿ ಶೇ.7.22ರಷ್ಟು ಏರಿಕೆ ದಾಖಲಿಸಿದೆ. ರಿಲಯನ್ಸ್ ಇಂಡಸ್ಟ್ರೀಸ್ ಶೇ.4.15, ಸಿಪ್ಲಾ ಶೇ.4.06, ಟಾಟಾ ಪವರ್ ಕಂಪನಿ ಶೇ.2.36, ಎಸಿಸಿ ಶೇ.1.80, ಮಾರುತಿ ಸುಝುಕಿ ಶೇ.0.99ರಷ್ಟು ಏರಿಕೆ ದಾಖಲಿಸಿದೆ.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಷೇರುಪೇಟೆ