ಏಷ್ಯನ್ ಷೇರು ಮಾರುಕಟ್ಟೆ ಇಳಿಮುಖದೆಡೆಗೆ ಸಾಗುತ್ತಿದೆ. ಜಪಾನಿನ ನಿಕ್ಕಿ 225 ಷೇರುಪೇಟೆ ಶೇ.0.99ರಷ್ಟು ಇಳಿಕೆ ಕಂಡಿದೆ. ಹಾಂಗ್‍ಕಾಂಗ್‌ನ ಹ್ಯಾಂಗ್‌ಸೆಂಗ್ ಮಾರುಕಟ್ಟೆ ಶೇ.0.26ರಷ್ಟು ಏರಿಕೆಯಾಗಿದೆ.
ಯುಎಸ್‌ನ ಡೋ ಜೋನ್ಸ್ ಇಂಡಸ್ಟ್ರಿಯಲ್ ಅವರೇಜ್ ಶೇ.0.53ರಷ್ಟು ಏರಿಕೆ ದಾಖಲಿಸಿದರೆ, ನಾಸ್ಡಾಕ್ ಕಾಂಪೋಸಿಟ್ ಶೇ.0.77ರಷ್ಟು ಏರಿಕೆ ಕಂಡಿದೆ.
ಇನ್ನು ಭಾರತದ ಷೇರು ಮಾರುಕಟ್ಟೆಯಲ್ಲೂ ಇಳಿಮುಖ ದಾಖಲಾಗಿದೆ. ವಾರದಲ್ಲಿ ಮುಂಬೈ ಷೇರು ಮಾರುಕಟ್ಟೆ ಸೂಚ್ಯಂಕ 195 ಪಾಯಿಂಟ್ ಕುಸಿತ ಕಂಡು ತನ್ನ ಐದು ವಾರಗಳಲ್ಲಿ ಪಡೆದ ಏರುಗತಿಯನ್ನು ಕುಗ್ಗಿಸಿಕೊಂಡಿದೆ.