ವಾಣಿಜ್ಯ ಸುದ್ದಿ | ಷೇರುಸೂಚ್ಯಂಕ | ಮಾರುಕಟ್ಟೆ ದರ
ಮುಖ್ಯ ಪುಟ » ಸುದ್ದಿ ಜಗತ್ತು » ವ್ಯವಹಾರ » ಷೇರುಸೂಚ್ಯಂಕ » ಆಟೋ ಷೇರುಗಳ ಭರ್ಜರಿ ಏರಿಕೆ; ಏರುಗತಿಯಲ್ಲಿ ಸೆನ್ಸೆಕ್ಸ್ (Bombay Stock Exchange | Sensex | Nifty)
Bookmark and Share Feedback Print
 
ದಿನದಂತ್ಯದಲ್ಲಿ ಮುಂಬೈ ಷೇರು ಮಾರುಕಟ್ಟೆ ವಹಿವಾಟು 90 ಪಾಯಿಂಟ್ ಗಳಿಸಿಕೊಂಡು ಏರಿಕೆಯ ಹಾದಿಯಲ್ಲಿದೆ.

ಬಿಎಸ್ಇ 30 ಷೇರು ಸೂಚ್ಯಂಕ 89.63 ಪಾಯಿಂಟ್ ಅಂದರೆ ಶೇ.0.44ರಷ್ಟು ಏರಿಕೆ ಕಂಡು 20,339.89ಕ್ಕೆ ತಲುಪಿದೆ.

ರಾಷ್ಟ್ರೀಯ ಷೇರು ಮಾರುಕಟ್ಟೆ ಸೂಚ್ಯಂಕ ನಿಫ್ಟಿ ಶೇ.0.53ರಷ್ಟು ಏರಿಕೆ ದಾಖಲಿಸಿ 6,135.85ಕ್ಕೆ ತಲುಪಿದೆ.

ಏರಿಕೆ ಕಂಡ ಷೇರುಗಳ ಪೈಕಿ ಆಟೋ ಷೇರುಗಳು ಉತ್ತಮ ಏರಿಕೆಯ ಹಾದಿಯಲ್ಲಿದೆ. ಹೀರೋ ಹೊಂಡ ಶೇ.2ರಷ್ಟು ಏರಿಕೆ ಕಂಡರೆ, ಮಾರುತಿ ಶೇ.1.63, ಮಹೀಂದ್ರಾ ಅಂಡ್ ಮಹೀಂದ್ರಾ ಶೇ.0.12ರಷ್ಟು ಏರಿದೆ.

ಇದಲ್ಲದೆ, ಸ್ಟೆರ್‌ಲೈಟ್ ಇಂಡಸ್ಟ್ರೀಸ್ ಶೇ.3.13ರಷ್ಟು ಏರಿಕೆ ಕಂಡರೆ, ಟಾಟಾ ಸ್ಟೀಲ್ ಶೇ.2, ಜಿಂದಾಲ್ ಸ್ಟೀಲ್ ಶೇ.0.54, ಹಿಂಡಲ್ಕೋ ಶೇ.0.26ರಷ್ಟು ಏರಿದೆ. ರಿಲಯನ್ಸ್ ಕಮ್ಯುನಿಕೇಶನ್ಸ್, ರಿಲಯನ್ಸ್ ಇನ್‌ಫ್ರಾ ತಲಾ ಶೇ.2ರಷ್ಟು ಏರಿದೆ. ಸಿಪ್ಲಾ ಶೇ.0.59, ಐಸಿಐಸಿಐ ಬ್ಯಾಂಕ್ ಶೇ.0.34, ಎಸ್‌ಬಿಐ ಶೇ.0.4ರಷ್ಟು ಏರಿದೆ.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಷೇರುಪೇಟೆ, ಬಿಎಸ್ಇ, ನಿಫ್ಟಿ