ಮುಂಬೈ ಷೇರು ಮಾರುಕಟ್ಟೆ ಸೂಚ್ಯಂಕ ದಿನದಾರಂಭದ ವಹಿವಾಟಿನಲ್ಲಿ 88 ಪಾಯಿಂಟ್ ಇಳಿಕೆ ಕಂಡಿದೆ. ಇದಕ್ಕೂ ಮೊದಲ ವಹಿವಾಟಿನಲ್ಲಿ ಸುಮಾರು 90 ಪಾಯಿಂಟ್ ಏರಿದ್ದ ಸೂಚ್ಯಂಕ ಇದೀಗ ಮತ್ತೆ 88 ಪಾಯಿಂಟ್ ಇಳಿಕೆ ಕಂಡಿದೆ.
ಬಿಎಸ್ಇ 30 ಷೇರು ಸೂಚ್ಯಂಕ 88.28 ಪಾಯಿಂಟ್ ಅಂದರೆ ಶೇ.0.43ರಷ್ಟು ಇಳಿಕೆಯಾಗಿ 20,251.61ಕ್ಕೆ ತಲುಪಿದೆ.
ರಾಷ್ಟ್ರೀಯ ಷೇರು ಮಾರುಕಟ್ಟೆ ಸೂಚ್ಯಂಕ ನಿಫ್ಟಿ 26.60 ಪಾಯಿಂಟ್ ಅಂದರೆ ಶೇ.0.35ರಷ್ಟು ಇಳಿಕೆ ಕಂಡು 6,109.25ಕ್ಕೆ ತಲುಪಿದೆ.
ಏಷ್ಯನ್ ಷೇರುಪೇಟೆ ಇದೀಗ ಇಳಿಕೆಯ ಹಾದಿಯಲ್ಲಿದೆ. ಹಾಂಗ್‌ಕಾಂಗ್‌ನ ಹ್ಯಾಂಗ್‌ಸೆಂಗ್ ಮಾರುಕಟ್ಟೆ ಶೇ.0.23ರಷ್ಟು ಇಳಿಕೆ ಕಂಡರೆ ಜಪಾನಿನ ನಿಕ್ಕಿ ಸೂಚ್ಯಂಕ ಶೇ.0.98ರಷ್ಟು ಇಳಿದಿದೆ.