ಮುಂಬೈ ಷೇರು ಮಾರುಕಟ್ಟೆ ಸೂಚ್ಯಂಕ ದಿನದಂತ್ಯದ ವಹಿವಾಟಿನಲ್ಲಿ 137 ಪಾಯಿಂಟ್ ಇಳಿಕೆ ಕಂಡಿದೆ.
ಬಿಎಸ್ಇ 30 ಷೇರು ಮಾರುಕಟ್ಟೆ ಸೂಚ್ಯಂಕ 136.55 ಪಾಯಿಂಟ್ ಇಳಿಕೆ ಕಂಡು 20,203.34ಕ್ಕೆ ತಲುಪಿದೆ.
ರಾಷ್ಟ್ರೀಯ ಷೇರು ಮಾರುಕಟ್ಟೆ ಸೂಚ್ಯಂಕ ನಿಫ್ಟಿ 44.95 ಪಾಯಿಂಟ್ ಕುಸಿದು 6,090.90ಕ್ಕೆ ತಲುಪಿದೆ.
ಬಿಎಸ್ಇ 30 ಷೇರುಗಳ ಪೈಕಿ 22 ಷೇರುಗಳು ಇಳಿಕೆ ಕಂಡರೆ, ಎಂಟು ಷೇರುಗಳು ಏರಿಕೆ ದಾಖಲಿಸಿವೆ.
ಇಳಿಕೆ ಕಂಡ ಷೇರುಗಳ ಪೈಕಿ ಹಿಂಡಲ್ಕೋ 4.40 ರೂಪಾಯಿ, ಟಾಟಾ ಸ್ಟೀಲ್ 6.90, ಜೆಎಸ್‌ಡಬ್ಲ್ಯು ಸ್ಟೀಲ್ 35.20 ರೂಪಾಯಿ, ಭಾರತ್ ಹೆವೀ ಎಂಜಿನಿಯರಿಂಗ್ ಲಿಮಿಟೆಡ್ 32.30 ರೂ ಇಳಿಕೆ ದಾಖಲಿಸಿವೆ.