ಮುಂಬೈ ಷೇರು ಮಾರುಕಟ್ಟೆ ಸೂಚ್ಯಂಕ ದಿನದಾರಂಭದ ವಹಿವಾಟಿನಲ್ಲಿ ಮತ್ತೆ ಕೊಂಚ ಪುಟಿದೆದ್ದಿದೆ. ಇದಕ್ಕೂ ಮೊದಲ ವಹಿವಾಟಿನಲ್ಲಿ 136 ಪಾಯಿಂಟ್ ಕುಸಿದಿದ್ದ ಷೇರುಪೇಟೆ ಇದೀಗ 88 ಪಾಯಿಂಟ್ ಏರಿಕೆ ಕಂಡಿದೆ.
ಬಿಎಸ್ಇ 30 ಷೇರು ಮಾರುಕಟ್ಟೆ ಸೂಚ್ಯಂಕ ದಿನದಾರಂಭದ ವಹಿವಾಟಿನಲ್ಲಿ 87.74 ಪಾಯಿಂಟ್ ಅಂದರೆ ಶೇ.0.40 ಏರಿಕೆ ಕಂಡು 20,291.08ಕ್ಕೆ ತಲುಪಿದೆ.
ರಾಷ್ಟ್ರೀಯ ಷೇರು ಮಾರುಕಟ್ಟೆ ಸೂಚ್ಯಂಕ ನಿಫ್ಟಿ 29.65 ಪಾಯಿಂಟ್ ಅಂದರೆ ಶೇ.0.48ರಷ್ಟು ಏರಿಕೆ ಕಂಡು 6,120.55ಕ್ಕೆ ತಲುಪಿದೆ.
ಏಷ್ಯನ್ ಮಾರುಕಟ್ಟೆಯೂ ಕೊಂಚ ಏರಿಕೆ ದಾಖಲಿಸಿದೆ. ಹಾಂಗ್‌ಕಾಂಗ್‌ನ ಹ್ಯಾಂಗ್‌ಸೆಂಗ್ ಮಾರುಕಟ್ಟೆ ಶೇ.0.43ರಷ್ಟು ಏರಿಕೆ ದಾಖಲಿಸಿದೆ. ಜಪಾನಿನ ನಿಕ್ಕಿ ಷೇರು ಸೂಚ್ಯಂಕ ಶೇ.0.93ರಷ್ಟು ಏರಿದೆ. ಯುಎಸ್‌ನ ಡೋ ಜೋನ್ಸ್ ಇಂಡಸ್ಟ್ರಿಯಲ್ ಅವರೇಜ್ ಶೇ.0.09ರಷ್ಟು ಕೊಂಚ ಚೇತರಿಕೆ ದಾಖಲಿಸಿದೆ.