ಮುಂಬೈ ಷೇರು ಮಾರುಕಟ್ಟೆ ಸೂಚ್ಯಂಕ ದಿನದಂತ್ಯದ ವಹಿವಾಟಿನಲ್ಲಿ 484 ಪಾಯಿಂಟ್ ಏರುವ ಮೂಲಕ ಭಾರೀ ಜಿಗಿತ ಕಂಡಿದೆ. ಕಳೆದ ಆರು ತಿಂಗಳಲ್ಲಿ ಒಂದೇ ಬಾರಿಗೆ ಈ ಮಟ್ಟಿನ ನೆಗೆತ ಕಂಡಿರಲಿಲ್ಲ.
ಬಿಎಸ್ಇ 30 ಷೇರು ಸೂಚ್ಯಂಕ 484.54 ಪಾಯಿಂಟ್ ಏರಿಕೆ ದಾಖಲಿಸಿ 20,687.88ಕ್ಕೆ ತಲುಪಿದೆ. ಕಳೆದ 2008ರ ಜನವರಿ ತಿಂಗಳ ನಂತರ ಇದು ಅತ್ಯುನ್ನತ ಸೂಚ್ಯಂಕವಾಗಿದೆ.
ರಾಷ್ಟ್ರೀಯ ಷೇರು ಮಾರುಕಟ್ಟೆ ಸೂಚ್ಯಂಕ ನಿಫ್ಟಿ 143 ಪಾಯಿಂಟ್ ಏರಿಕೆ ಕಂಡು 6,233.90ಕ್ಕೆ ತಲುಪಿದೆ.
ಬಿಎಸ್ಇ 30 ಷೇರುಗಳ ಪೈಕಿ 28 ಷೇರುಗಳು ಏರಿಕೆ ಕಂಡರೆ ಉಳಿದೆರಡು ಕೊಂಚ ಇಳಿಮುಖ ಕಂಡಿದೆ. ಆಯಿಲ್ ವಲಯದ ದೈತ್ಯ ರಿಲಯನ್ಸ್ ಇಂಡಸ್ಟ್ರೀಸ್ 18.25 ಪಾಯಿಂಟ್ ಏರಿಕೆ ಕಂಡರೆ, ಐಟಿ ದೈತ್ಯ ಇನ್ಫೋಸಿಸ್ ಟೆಕ್ನಾಲಜೀಸ್ 76.30 ರೂಪಾಯಿ ಏರಿದೆ. ಐಟಿ ಷೇರುಗಳು ಶೇ.3.15ರಷ್ಟು ಏರಿಕೆ ಕಂಡಿದೆ.