ಮುಂಬೈ ಷೇರು ಮಾರುಕಟ್ಟೆ ಸೂಚ್ಯಂಕ ದಿನದಾರಂಭದಲ್ಲಿ ಉತ್ತಮ ಏರಿಕೆ ಕಾಣುವ ಮೂಲಕ ಕಳೆದ 33 ತಿಂಗಳಲ್ಲೇ ಕಾಣದ ಏರಿಕೆಯ ಮಟ್ಟವನ್ನು ಸೂಚ್ಯಂಕ ತಲುಪಿದೆ.
ಬಿಎಸ್ಇ 30 ಷೇರು ಸೂಚ್ಯಂಕ 99.98 ಪಾಯಿಂಟ್ ಅಂದರೆ ಶೇ.0.48ರಷ್ಟು ಏರಿಕೆ ಕಾಣುವ ಮೂಲಕ 20,700ಕ್ಕೇರಿತು. ನಂತರ ಕೂಡಲೇ ಈ ಸೂಚ್ಯಂಕ ಪುಟಿದೆದ್ದು 20,808.44ಕ್ಕೆ ತಲುಪಿದೆ. ಆ ಮೂಲಕ 33 ತಿಂಗಳಲ್ಲೇ ಕಾಣದ ಮಟ್ಟವನ್ನು ತಲುಪಿದೆ.
ರಾಷ್ಟ್ರೀಯ ಷೇರು ಮಾರುಕಟ್ಟೆ ನಿಫ್ಟಿ 34.60 ಪಾಯಿಂಟ್ ಅಂದರೆ ಶೇ.0.56ರಷ್ಟು ಏರಿಕೆ ಕಂಡು 6,268.50ಕ್ಕೆ ತಲುಪಿದೆ.
ಏಷ್ಯನ್ ಮಾರುಕಟ್ಟೆಯೂ ಚುರುಕುಗೊಂಡಿದ್ದು, ಜಪಾನ್, ಇಂಡೋನೇಷ್ಯಾ, ಚೀನಾ, ಸೌತ್ ಕೊರಿಯಾ, ಹಾಂಗ್‌ಕಾಂಗ್, ತೈವಾನ್, ಸಿಂಗಾಪುರದ ಷೇರುಗಳು ಶೇ.0.23ರಿಂದ ಶೇ.1.82ರವರೆಗೆ ಏರಿಕೆ ದಾಖಲಿಸಿದೆ.
ಯುಎಸ್‌ನ ಡೋ ಜೋನ್ಸ್ ಇಂಡಸ್ಟ್ರಿಯಲ್ ಅವರೇಜ್ ಶೇ.0.69ರಷ್ಟು ಏರಿಕೆ ಕಂಡಿದೆ. ನಾಸ್ಡಾಕ್ ಕಾಂಪೋಸಿಟ್ ಸೂಚ್ಯಂಕ ಶೇ.0.96ರಷ್ಟು ಏರಿದೆ.