ಮುಂಬೈ ಷೇರು ಮಾರುಕಟ್ಟೆ ಸೂಚ್ಯಂಕ ದಿನದಾರಂಭದ ವಹಿವಾಟಿನಲ್ಲಿ 81 ಪಾಯಿಂಟ್‌ಗಳಷ್ಟು ಮತ್ತೆ ಪುಟಿದೆದ್ದಿದೆ.
ಬಿಎಸ್ಇ 30 ಷೇರು ಸೂಚ್ಯಂಕ ದಿನದಾರಂಭದ ವಹಿವಾಟಿನಲ್ಲಿ 80.81 ಪಾಯಿಂಟ್ ಅಂದರೆ ಶೇ.0.39ರಷ್ಟು ಏರಿಕೆ ಕಂಡು 20,578.45ಕ್ಕೆ ತಲುಪಿದೆ. ಇದಕ್ಕೂ ಮೊದಲ ವಹಿವಾಟಿನಲ್ಲಿ 190.24 ಪಾಯಿಂಟ್ ಕುಸಿತ ಕಂಡಿತ್ತು.
ರಾಷ್ಟ್ರೀಯ ಷೇರು ಮಾರುಕಟ್ಟೆ ಸೂಚ್ಯಂಕ ನಿಫ್ಟಿ 23.25 ಪಾಯಿಂಟ್ ಅಂದರೆ ಶೇ.0.30ಯಷ್ಟು ಏರಿಕೆ ದಾಖಲಿಸಿ 6,200.60ಕ್ಕೆ ತಲುಪಿದೆ.
ಇನ್ಫೋಸಿಸ್ ಟೆಕ್ನಾಲಜಿ ಷೇರು ಸೂಚ್ಯಂಕ ತನ್ನ ಎರಡನೇ ತ್ರೈಮಾಸಿಕ ಅವಧಿಯಲ್ಲಿ ಶೇ.13.15ರಷ್ಟು ನಿವ್ವಳ ಲಾಭ ಗಳಿಸಿದ್ದು ಇದು ಷೇರು ಪೇಟೆಯ ಜಿಗಿತಕ್ಕೆ ಕಾರಣವಾಗಿದೆ. ಇನ್ಫೋಸಿಸ್ ಷೇರು ಶೇ.1.8ರಷ್ಟು ಏರಿಕೆ ಕಂಡಿದೆ.
ಏಷ್ಯನ್ ಮಾರುಕಟ್ಟೆ ಪೈಕಿ ಹಾಂಗ್‌ಕಾಂಗ್‌ನ ಹ್ಯಾಂಗ್‌ಸೆಂಗ್ ಮಾರುಕಟ್ಟೆ ಶೇ.0.69ರಷ್ಟು ಇಳಿಕೆ ಕಂಡಿದೆ. ಜಪಾನಿನ ನಿಕ್ಕಿ ಷೇರು ಮಾರುಕಟ್ಟೆ ಸೂಚ್ಯಂಕ ಶೇ.0.42ರಷ್ಟು ಇಳಿದಿದೆ. ಯುಎಸ್‌ನ ಡೋ ಜೋನ್ಸ್ ಇಂಡಸ್ಟ್ರಿಯಲ್ ಅವರೇಜ್ ಶೇ.0.01ರಷ್ಟು ಇಳಿಮುಖ ಕಂಡಿದೆ.