ಮುಂಬೈ ಷೇರು ಮಾರುಕಟ್ಟೆ ಸೂಚ್ಯಂಕ ದಿನದಂತ್ಯದ ವಹಿವಾಟಿನಲ್ಲಿ ಭಾರೀ ಕುಸಿತ ಕಂಡಿದೆ. ಇದ್ಕಕೂ ಮೊದಲು ಏರಿಕೆಯೆಡೆಗೆ ಮುನ್ನುಗ್ಗಿ 20,600ಕ್ಕೂ ಮೇಲೇರಿದ್ದ ಸೂಚ್ಯಂಕ ಇದೀಗ ಜರ್ರನೆ ಕೆಳಗಿಳಿದಿದೆ.
ಬಿಎಸ್ಇ 30 ಷೇರು ಸೂಚ್ಯಂಕ 372.59 ಪಾಯಿಂಟ್ ಇಳಿಕೆ ಕಂಡು 20,125.05ಕ್ಕೆ ತಲುಪಿದೆ.
ರಾಷ್ಟ್ರೀಯ ಷೇರು ಮಾರುಕಟ್ಟೆ ಸೂಚ್ಯಂಕ ನಿಫ್ಟಿ 114.70 ಪಾಯಿಂಟ್ ಇಳಿಕೆ ಕಂಡು 6,062.65ಕ್ಕೆ ತಲುಪಿದೆ.
ಇಳಿಕೆ ಕಂಡ ಪ್ರಮುಖ ಷೇರುಗಳ ಪೈಕಿ ರಿಲಯನ್ಸ್ ಇಂಡಸ್ಟ್ರೀಸ್ 17.35 ರೂಪಾಯಿ ಇಳಿಕೆ ಕಂಡರೆ, ಎಸ್‌ಬಿಐ, ಎಚ್‌ಡಿಎಫ್‌ಸಿ, ಐಸಿಐಸಿಐ ಬ್ಯಾಂಕ್ ಮತ್ತಿತರ ಷೇರುಗಳೂ ಕೂಡಾ ಇಳಿಕೆ ಕಂಡಿವೆ.