ವಾಣಿಜ್ಯ ಸುದ್ದಿ | ಷೇರುಸೂಚ್ಯಂಕ | ಮಾರುಕಟ್ಟೆ ದರ
ಮುಖ್ಯ ಪುಟ » ಸುದ್ದಿ ಜಗತ್ತು » ವ್ಯವಹಾರ » ಷೇರುಸೂಚ್ಯಂಕ » ಮತ್ತೆ ಪುಟಿದೆದ್ದ ಷೇರುಪೇಟೆ; ಸೂಚ್ಯಂಕ ಮರಳಿ 20,000ಕ್ಕೆ (Bombay Stock Exchange | Sensex | Nifty)
Bookmark and Share Feedback Print
 
ಮುಂಬೈ ಷೇರು ಮಾರುಕಟ್ಟೆ ಸೂಚ್ಯಂಕ ದಿನದಂತ್ಯದ ವಹಿವಾಟಿನಲ್ಲಿ 44 ಪಾಯಿಂಟ್ ಏರಿಕೆ ಕಾಣುವ ಮೂಲಕ ಬೆಳಗ್ಗಿನ ವಹಿವಾಟಿನಲ್ಲಿ ಕಂಡ ಭಾರೀ ಇಳಿಕೆಯಿಂದ ಕೊಂಚ ಚೇತರಿಸಿದೆ.

ಬಿಎಸ್ಇ 30 ಷೇರು ಸೂಚ್ಯಂಕ 43.84 ಪಾಯಿಂಟ್ ಅಂದರೆ ಶೇ.0.22ರಷ್ಟು ಏರಿಕೆ ದಾಖಲಿಸಿ 20,168.89ಕ್ಕೆ ತಲುಪಿದೆ. ಇದಕ್ಕೂ ಮೊದಲು ಬೆಳಗಿನ ವಹಿವಾಟಿನಲ್ಲಿ 20,000ಕ್ಕಿಂತಲೂ ಸೂಚ್ಯಂಕ ಕೆಳಗಿಳಿದಿತ್ತು.

ರಾಷ್ಟ್ರೀಯ ಷೇರು ಮಾರುಕಟ್ಟೆ ಸೂಚ್ಯಂಕ ನಿಫ್ಟಿ ಶೇ.0.22ರಷ್ಟು ಏರಿಕೆ ಕಂಡು 6,075.95ಕ್ಕೆ ತಲುಪಿದೆ.

ಎಂಜಿನಿಯರಿಂಗ್ ದೈತ್ಯ ಎಲ್‌ಎಂಡ್‌ಟಿ ತನ್ನ ಮೂರನೇ ತ್ರೈಮಾಸಿಕ ಅವಧಿಯಲ್ಲಿ ಶೇ.32ರಷ್ಟು ಲಾಭ ಏರಿಸಿಕೊಂಡಿದ್ದು ಈ ಹಿನ್ನೆಲೆಯಲ್ಲಿ ಎಲ್ಎಂಡ್‌ಟಿ ಷೇರು ಶೇ.1.19ರಷ್ಟು ಏರಿಕೆ ದಾಖಲಿಸಿದೆ. ಇನ್ಫೋಸಿಸ್ ಷೇರು ಶೇ.3.39ರಷ್ಟು ಇಳಿಕೆ ಕಂಡರೆ, ಟಿಸಿಎಸ್ ಶೇ.3ರಷ್ಟು ಏರಿಕೆ ಕಂಡಿದೆ. ವಿಪ್ರೋ ಷೇರು ಶೇ.1.26ರಷ್ಟು ಇಳಿದಿದೆ.
ಸಂಬಂಧಿತ ಮಾಹಿತಿ ಹುಡುಕಿ