ಮುಂಬೈ ಷೇರು ಮಾರುಕಟ್ಟೆ ಸೂಚ್ಯಂಕ ದಿನದಾರಂಭದ ವಹಿವಾಟಿನಲ್ಲಿ 163 ಪಾಯಿಂಟ್ ಏರಿಕೆ ಕಂಡಿದೆ.ವಿದೇಶೀ ಬಂಡವಾಳಗಳ ಒಳಹರಿವು ಷೇರುಪೇಟೆಗೆ ಮತ್ತಷ್ಟು ಬಲ ನೀಡಿದೆ.
ಬಿಎಸ್ಇ 30 ಷೇರು ಮಾರುಕಟ್ಟೆ ಸೂಚ್ಯಂಕ 163.13 ಪಾಯಿಂಟ್ ಅಂದರೆ ಶೇ.0.80ರಷ್ಟು ಏರಿಕೆ ದಾಖಲಿಸಿ 20,332.02ಕ್ಕೆ ತಲುಪಿದೆ. ಆಯಿಲ್, ಗ್ಯಾಸ್, ಕ್ಯಾಪಿಟಲ್ ಗೂಡ್ಸ್ ಹಾಗೂ ಮೆಟಲ್ ಷೇರುಗಳು ಮತ್ತೆ ಬಲ ಪಡೆದುಕೊಂಡಿವೆ. ಇದಕ್ಕೂ ಮೊದಲ ವಹಿವಾಟಿನಲ್ಲಿ ಸೂಚ್ಯಂಕ 43.84 ಪಾಯಿಂಟ್ ಏರಿಕೆ ಕಂಡಿತ್ತು.
ರಾಷ್ಟ್ರೀಯ ಷೇರು ಮಾರುಕಟ್ಟೆ ಸೂಚ್ಯಂಕ ನಿಫ್ಟಿ 43.90 ಪಾಯಿಂಟ್ ಅಂದರೆ ಶೇ.0.72ರಷ್ಟು ಏರಿಕೆ ದಾಖಲಿಸಿ 6,119.85ಕ್ಕೆ ತಲುಪಿದೆ.
ಏಷ್ಯನ್ ಮಾರುಕಟ್ಟೆಯಲ್ಲಿ ಹಾಂಗ್‌ಕಾಂಗ್‌ನ ಹ್ಯಾಂಗ್‌ಸೆಂಗ್ ಮಾರುಕಟ್ಟೆ ಶೇ.0.59ರಷ್ಟು ಏರಿಕೆ ಕಂಡಿದೆ. ಜಪಾನಿನ ನಿಕ್ಕಿ ಷೇರು ಸೂಚ್ಯಂಕ ಶೇ.0.53ರಷ್ಟು ಏರಿಕೆ ದಾಖಲಿಸಿದೆ.