ಮುಂಬೈ ಷೇರು ಮಾರುಕಟ್ಟೆ ಸೂಚ್ಯಂಕ ದಿನದಂತ್ಯದ ವಹಿವಾಟಿನಲ್ಲಿ 98 ಪಾಯಿಂಟ್ ಇಳಿಕೆ ಕಂಡಿದೆ.
ಬಿಎಸ್ಇ 30 ಷೇರು ಸೂಚ್ಯಂಕ ದಿನದಾರಂಭದ ವಹಿವಾಟಿನಲ್ಲಿ ಕೊಂಚ ಕುಸಿತ ಕಂಡಿದ್ದು 97.52 ಪಾಯಿಂಟ್ ಅಂದರೆ ಶೇ.0.48ರಷ್ಟು ಇಳಿಕೆ ಕಂಡು 19,885.61ಕ್ಕೆ ತಲುಪಿದೆ. ಇದಕ್ಕೂ ಮೊದಲ ವಹಿವಾಟಿನಲ್ಲಿ 186 ಪಾಯಿಂಟ್ ಕುಸಿತ ಕಂಡಿತ್ತು.
ರಾಷ್ಟ್ರೀಯ ಷೇರು ಮಾರುಕಟ್ಟೆ ಸೂಚ್ಯಂಕ ನಿಫ್ಟಿ 35.75 ಪಾಯಿಂಟ್ ಅಂದರೆ ಶೇ.0.59ರಷ್ಟು ಇಳಿಕೆ ಕಂಡು 5,991.55ಕ್ಕೆ ತಲುಪಿದೆ.
ಹಾಂಗ್‌ಕಾಂಗ್‌ನ ಹ್ಯಾಂಗ್‌ಸೆಂಗ್ ಸೂಚ್ಯಂಕ ಶೇ.1ರಷ್ಟು ಕುಸಿದಿದೆ. ಜಪಾನಿನ ನಿಕ್ಕಿ ಸೂಚ್ಯಂಕ ಶೇ.2.18ರಷ್ಟು ಇಳಿಕೆ ಕಂಡಿದೆ. ಯುಎಸ್‌ನ ಡೋ ಜೋನ್ಸ್ ಇಂಡಸ್ಟ್ರಿಯಲ್ ಅವರೇಜ್ ಶೇ.1.48ರಷ್ಟು ಇಳಿಕೆ ದಾಖಲಿಸಿದೆ.