ಮುಂಬೈ ಷೇರು ಮಾರುಕಟ್ಟೆ ಸೂಚ್ಯಂಕ ದಿನದಂತ್ಯದ ವಹಿವಾಟಿನಲ್ಲಿ 111 ಪಾಯಿಂಟ್ ಇಳಿಕೆ ಕಂಡಿದೆ.
ಬಿಎಸ್ಇ 30 ಷೇರು ಸೂಚ್ಯಂಕ 110.98 ಪಾಯಿಂಟ್ ಇಳಿಕೆ ಕಂಡು 19,872.15ಕ್ಕೆ ತಲುಪಿದೆ. ಮೆಟಲ್, ರಿಯಾಲ್ಟಿ, ಕನ್‌ಸ್ಯೂಮರ್ ಡ್ಯುರೇಬಲ್‌ಗಳ ಷೇರುಗಳು ಇಳಿಕೆಯತ್ತ ಸಾಗಿದ್ದು, ಸೂಚ್ಯಂಕದ ಇಳಿಕೆಗೆ ಕಾರಣವಾಗಿದೆ.
ರಾಷ್ಟ್ರೀಯ ಷೇರು ಮಾರುಕಟ್ಟೆ ಸೂಚ್ಯಂಕ ನಿಫ್ಟಿ 45.20 ಪಾಯಿಂಟ್ ಇಳಿಕೆ ದಾಖಲಿಸಿ 6000ಕ್ಕಿಂತ ಕೆಳಗಿಳಿದು 5,982.10ಕ್ಕೆ ತಲುಪಿದೆ.
ಬಿಎಸ್ಇ 30 ಷೇರುಗಳ ಪೈಕಿ 21 ಷೇರುಗಳು ಕುಸಿದರೆ, ಉಳಿದವು ಏರಿಕೆಯತ್ತ ಮುಖ ಮಾಡಿವೆ.
ಮೆಟಲ್ ಷೇರುಗಳು ಶೇ.2.22ರಷ್ಟು ಕುಸಿತ ಕಂಡಿದೆ. ಏಷ್ಯನ್ ಷೇರುಗಳ ಪೈಕಿ ಏಷ್ಯಾ ಪೆಸಿಫಿಕ್ ಸೂಚ್ಯಂಕ ಶೇ.1.1ರಷ್ಟು ಕುಸಿದಿದೆ. ಚೀನಾದ ಷೇರುಗಳೂ ಕುಸಿದಿವೆ.