ವಾಣಿಜ್ಯ ಸುದ್ದಿ | ಷೇರುಸೂಚ್ಯಂಕ | ಮಾರುಕಟ್ಟೆ ದರ
ಮುಖ್ಯ ಪುಟ » ಸುದ್ದಿ ಜಗತ್ತು » ವ್ಯವಹಾರ » ಷೇರುಸೂಚ್ಯಂಕ » ಮತ್ತೆ ಕೊಂಚ ಪುಟಿದೆದ್ದ ಷೇರು ಮಾರುಕಟ್ಟೆ (Bombay Stock Exchange | Sensex | Nifty)
Bookmark and Share Feedback Print
 
ಮುಂಬೈ ಷೇರು ಮಾರುಕಟ್ಟೆ ಸೂಚ್ಯಂಕ ದಿನದಾರಂಭದ ವಹಿವಾಟಿನಲ್ಲಿ ಮತ್ತೆ ಕೊಂಚ ಪುಟಿದೆದ್ದಿದೆ. 87 ಪಾಯಿಂಟ್ ಏರಿಕೆ ಕಾಣುವ ಮೂಲಕ ಕೊಂಚ ಗರಿಗೆದರಿದೆ.

ಬಿಎಸ್ಇ 30 ಷೇರು ಸೂಚ್ಯಂಕ 87.49 ಪಾಯಿಂಟ್ ಅಂದರೆ ಶೇ.0.45ರಷ್ಟು ಏರಿಕೆ ಕಾಣುವ ಮೂಲಕ 19,959.64ಕ್ಕೆ ತಲುಪಿದೆ. ಇದಕ್ಕೂ ಮೊದಲ ಎರಡು ವಹಿವಾಟುಗಳಲ್ಲಿ ಸೆನ್ಸೆಕ್ಸ್ 297 ಪಾಯಿಂಟ್ ಕುಸಿತ ದಾಖಲಿಸಿತ್ತು.

ರಾಷ್ಟ್ರೀಯ ಷೇರು ಮಾರುಕಟ್ಟೆ ಸೂಚ್ಯಂಕ ನಿಫ್ಟಿ 28.65 ಪಾಯಿಂಟ್ ಅಂದರೆ ಶೇ.0.47ರಷ್ಟು ಏರಿಕೆ ಕಂಡು 6,010.75ಕ್ಕೆ ತಲುಪಿದೆ.

ಏಷ್ಯನ್ ಮಾರುಕಟ್ಟೆಯಲ್ಲಿಯೂ ಕೊಂಚ ಏರುಗತಿ ದಾಖಲಾಗಿದೆ. ಹಾಂಗ್‌ಕಾಂಗ್‌ನ ಹ್ಯಾಂಗ್‌ಸೆಂಗ್ ಮಾರುಕಟ್ಟೆ ಶೇ.0.68ರಷ್ಟು ಏರಿಕೆ ಕಂಡಿದೆ. ಜಪಾನೀ ಷೇರು ನಿಕ್ಕಿ ಶೇ.0.66ರಷ್ಟು ಚೇತರಿಕೆ ದಾಖಲಿಸಿದೆ. ಯುಎಸ್‌ನ ಡೋ ಜೋನ್ಸ್ ಇಂಡಸ್ಟ್ರಿಯಲ್ ಅವರೇಜ್ ಶೇ.1.18ರಷ್ಟು ಏರಿಕೆ ಕಂಡಿದೆ.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಷೇರುಪೇಟೆ, ಬಿಎಸ್ಇ, ನಿಫ್ಟಿ