ವಾಣಿಜ್ಯ ಸುದ್ದಿ | ಷೇರುಸೂಚ್ಯಂಕ | ಮಾರುಕಟ್ಟೆ ದರ
ಮುಖ್ಯ ಪುಟ » ಸುದ್ದಿ ಜಗತ್ತು » ವ್ಯವಹಾರ » ಷೇರುಸೂಚ್ಯಂಕ » ಭಾರೀ ಏರಿಕೆ, ಮತ್ತೆ 20,000ಕ್ಕಿಂತ ಮೇಲೇರಿದ ಸೆನ್ಸೆಕ್ಸ್ (Bombay Stock Exchange | Sensex | Nifty)
Bookmark and Share Feedback Print
 
ಮುಂಬೈ ಷೇರು ಮಾರುಕಟ್ಟೆ ಸೂಚ್ಯಂಕ ದಿನದಂತ್ಯದ ವಹಿವಾಟಿನಲ್ಲಿ ಮತ್ತೆ ಭಾರೀ ಏರಿಕೆ ಕಾಣುವ ಮೂಲಕ ಮತ್ತೆ 20,000ದ ವಲಯವನ್ನು ದಾಟಿದೆ.

ಬಿಎಸ್ಇ 30 ಷೇರು ಮಾರುಕಟ್ಟೆ ಸೂಚ್ಯಂಕ 388.43 ಪಾಯಿಂಟ್ ಅಂದರೆ ಶೇ.1.95ರಷ್ಟು ಏರಿಕೆ ದಾಖಲಿಸಿ 20,260.58ಕ್ಕೆ ತಲುಪಿದೆ.

ರಾಷ್ಟ್ರೀಯ ಷೇರು ಮಾರುಕಟ್ಟೆ ಸೂಚ್ಯಂಕ ನಿಫ್ಟಿ ಶೇ.2ರಷ್ಟು ಏರಿಕೆ ಕಂಡು 6,101.53ಕ್ಕೆ ತಲುಪಿದೆ.

ಬಿಎಸ್ಇ 30 ಷೇರುಗಳ ಪೈಕಿ 29 ಷೇರುಗಳು ಏರಿಕೆ ಕಂಡರೆ, ಎನ್‌ಟಿಪಿಸಿ ಷೇರು ಮಾತ್ರ ಶೇ.0.12ರಷ್ಟು ಕುಸಿತ ಕಂಡಿದೆ.

ಐಟಿ ದೈತ್ಯ ಟಿಸಿಎಸ್ ಶೇ.2ರಷ್ಟು ಏರಿಕೆ ಕಂಡರೆ, ಇನ್ಫೋಸಿಸ್ ಷೇರು ಶೇ.0.4, ವಿಪ್ರೋ ಶೇ.1.46ರಷ್ಟು ಏರಿಕೆ ಕಂಡಿದೆ. ಎಫ್‌ಎಂಸಿಜಿ ದೈತ್ಯ ಐಟಿಸಿ ಷೇರು ಶೇ.3.69ರಷ್ಟು ಏರಿಕೆ ಕಂಡರೆ, ಎಚ್‌ಯುಎಲ್ ಶೇ.4ರಷ್ಟು ಚೇತರಿಸಿದೆ. ಮೆಟಲ್ ಷೇರು ವಲಯ ಶೇ.5.05ರಷ್ಟು ಏರಿಕೆ ಕಂಡಿದ್ದು, ಈ ಪೈಕಿ ಟಾಟಾ ಸ್ಟೀಲ್ ಶೇ.2, ಜಿಂದಾಲ್ ಸ್ಟೀಲ್ ಶೇ.1.64, ಸ್ಟೆರ್ಲೈಟ್ ಶೇ.1.41ರಷ್ಟು ಏರಿದೆ.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಷೇರುಪೇಟೆ, ಬಿಎಸ್ಇ, ನಿಫ್ಟಿ