ಮುಂಬೈ ಷೇರು ಮಾರುಕಟ್ಟೆ ಸೂಚ್ಯಂಕ ದಿನದಾರಂಭದ ವಹಿವಾಟಿನಲ್ಲಿ 79.31 ಪಾಯಿಂಟ್ ಏರಿಕೆ ದಾಖಲಿಸಿದೆ.
ಬಿಎಸ್ಇ 30 ಷೇರು ಸೂಚ್ಯಂಕ ದಿನದಾರಂಭದಲ್ಲಿ 79.31 ಪಾಯಿಂಟ್ ಅಂದರೆ ಶೇ.0.39ರಷ್ಟು ಏರಿಕೆ ದಾಖಲಿಸಿ 20,339.89ಕ್ಕೆ ತಲುಪಿದೆ. ಐಟಿ, ಟೆಕ್ ಹಾಗೂ ಕನ್ಯೂಮರ್ ಡ್ಯುರೇಬಲ್ಸ್ ಷೇರುಗಳು ಉತ್ತಮ ಏರಿಕೆ ಕಂಡಿದೆ. ಇದಕ್ಕೂ ಮೊದಲ ವಹಿವಾಟಿನಲ್ಲಿ 388.43 ಪಾಯಿಂಟ್ ಏರಿಕೆ ಕಂಡಿತ್ತು.
ರಾಷ್ಟ್ರೀಯ ಷೇರು ಮಾರುಕಟ್ಟೆ ಸೂಚ್ಯಂಕ ನಿಫ್ಟಿ 19.60 ಪಾಯಿಂಟ್ ಅಂದರೆ ಶೇ.0.32ರಷ್ಟು ಏರಿಕೆ ಕಂಡು 6,121.10ಕ್ಕೆ ತಲುಪಿದೆ.
ಏಷ್ಯನ್ ಷೇರು ಮಾರುಕಟ್ಟೆ ಕೊಂಚ ಏರಿಳಿತ ದಾಖಲಿಸಿದೆ. ಜಪಾನಿನ ನಿಕ್ಕಿ ಷೇರು ಸೂಚ್ಯಂಕ ಶೇ.0.46ರಷ್ಟು ಏರಿಕೆ ದಾಖಲಿಸಿದೆ. ಹಾಂಗ್‌ಕಾಂಗ್‌ನ ಹ್ಯಾಂಗ್ಸೆಂಗ್ ಮಾರುಕಟ್ಟೆ ಶೇ.0.26ರಷ್ಟು ಕುಸಿದಿದೆ. ಯುಎಸ್‌ನ ಡೋ ಜೋನ್ಸ್ ಇಂಡಸ್ಟ್ರಿಯಲ್ ಅವರೇಜ್ ಶೇ.0.35ರಷ್ಟು ಚೇತರಿಕೆ ದಾಖಲಿಸಿದೆ.