ಸೆನ್ಸೆಕ್ಸ್: ಉಕ್ಕು ,ತೈಲ ಕ್ಷೇತ್ರಗಳ ಶೇರು ಖರೀದಿಯ ಭರಾಟೆ
ಮುಂಬೈ, ಸೋಮವಾರ, 25 ಅಕ್ಟೋಬರ್ 2010( 12:03 IST )
ಏಷ್ಯಾ ಮಾರುಕಟ್ಟೆಗಳ ಸ್ಥಿರವಹಿವಾಟಿನ ಮಧ್ಯೆಯು ಬಂಡವಾಳದ ಒಳಹರಿವು ಹೆಚ್ಚಳ ಮತ್ತು ಉಕ್ಕು ಹಾಗೂ ತೈಲ ಕ್ಷೇತ್ರಗಳ ಶೇರು ಖರೀದಿಯ ಭರಾಟೆಯಿಂದಾಗಿ ಶೇರುಪೇಟೆಯ ಸೂಚ್ಯಂಕ 142 ಪಾಯಿಂಟ್‌ಗಳ ಏರಿಕೆಯಾಗಿದೆ.
ಹಿಂದಿನ ದಿನದ ವಹಿವಾಟಿನ ಮುಕ್ತಾಯಕ್ಕೆ 94.72 ಪಾಯಿಂಟ್‌ಗಳ ಏರಿಕೆ ಕಂಡ ಬಿಎಸ್‌ಇ-30 ಸೂಚ್ಯಂಕ, ಇಂದಿನ ಆರಂಭಿಕ ವಹಿವಾಟಿನಲ್ಲಿ 141.90 ಪಾಯಿಂಟ್‌ಗಳ ಏರಿಕೆ ಕಂಡು 20,307.76 ಅಂಕಗಳಿಗೆ ತಲುಪಿದೆ.
ಅದರಂತೆ, ರಾಷ್ಟ್ರೀಯ ಮಾರುಕಟ್ಟೆ ನಿಫ್ಟಿ ಸೂಚ್ಯಂಕ ಕೂಡಾ 42.10 ಪಾಯಿಂಟ್‌ಗಳ ಏರಿಕೆ ಕಂಡು 6,108.15 ಅಂಕಗಳಿಗೆ ತಲುಪಿದೆ.
ಏಷ್ಯಾ ಮಾರುಕಟ್ಟೆಗಳ ಚೇತರಿಕೆ ಹಾಗೂ ಕಾರ್ಪೋರೇಟ್ ಕಂಪೆನಿಗಳ ತ್ರೈಮಾಸಿಕ ನಿವ್ವಳ ಆದಾಯದಲ್ಲಿ ಹೆಚ್ಚಳವಾಗಿದ್ದರಿಂದ, ಮಾರುಕಟ್ಟೆಗಳಲ್ಲಿ ವಿದೇಶಿ ಬಂಡವಾಳದ ಒಳಹರಿವು ಹೆಚ್ಚಳವಾಗಿದೆ ಎಂದು ಮಾರುಕಟ್ಟೆಯ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
ಏಷ್ಯಾ ವಲಯದಲ್ಲಿ, ಹಾಂಗ್‌ಕಾಂಗ್‌ನ ಹಾಂಗ್‌ಸೆಂಗ್ ಶೇರುಪೇಟೆ ಇಂದಿನ ಆರಂಭಿಕ ವಹಿವಾಟಿನಲ್ಲಿ ಶೇ.0.28ರಷ್ಟು ಏರಿಕೆ ಕಂಡಿದೆ.