ವಾಣಿಜ್ಯ ಸುದ್ದಿ | ಷೇರುಸೂಚ್ಯಂಕ | ಮಾರುಕಟ್ಟೆ ದರ
ಮುಖ್ಯ ಪುಟ » ಸುದ್ದಿ ಜಗತ್ತು » ವ್ಯವಹಾರ » ಷೇರುಸೂಚ್ಯಂಕ » ಸೆನ್ಸೆಕ್ಸ್: ತೈಮಾಸಿಕ ಫಲಿತಾಂಶದಿಂದ ಸೂಚ್ಯಂಕ ಚೇತರಿಕೆ (BSE | Sensex | Quarterly results | HDFC | RIL | TCS)
Bookmark and Share Feedback Print
 
ಬ್ಲೂ-ಚಿಪ್ ಕಂಪೆನಿಗಳ ಸಕಾರಾತ್ಮಕ ತ್ರೈಮಾಸಿಕ ಫಲಿತಾಂಶ ಹಾಗೂ ಜಾಗತಿಕ ಮಾರುಕಟ್ಟೆಗಳ ಸ್ಥಿರವಹಿವಾಟಿನಿಂದಾಗಿ, ಬಿಎಸ್‌ಇ ಸೂಚ್ಯಂಕ ಇಂದಿನ ವಹಿವಾಟಿನ ಮುಕ್ತಾಯಕ್ಕೆ 137 ಪಾಯಿಂಟ್‌ಗಳ ಏರಿಕೆ ಕಂಡು ಅಂತ್ಯಗೊಂಡಿದೆ.

ವಹಿವಾಟಿನಲ್ಲಿ ಎಚ್‌ಡಿಎಫ್‌ಸಿ, ರಿಲಯನ್ಸ್, ಟಾಟಾ ಕನ್ಸಲ್‌ಟನ್ಸಿ ಸರ್ವಿಸಸ್ ಶೇರುಗಳು ಏರಿಕೆ ಕಂಡಿದ್ದರಿಂದ, ಬಿಎಸ್‌ಇ ಸೂಚ್ಯಂಕ 137.26 ಪಾಯಿಂಟ್‌ಗಳ ಏರಿಕೆ ಕಂಡು 20,303.12 ಅಂಕಗಳಿಗೆ ತಲುಪಿದೆ.

ರಾಷ್ಟ್ರೀಯ ಮಾರುಕಟ್ಟೆ ನಿಫ್ಟಿ ಸೂಚ್ಯಂಕ ವಹಿವಾಟಿನ ಮುಕ್ತಾಯಕ್ಕೆ ಶೇ.0.66 ಪಾಯಿಂಟ್‌ಗಳ ಏರಿಕೆ ಕಂಡು 6,105.80 ಅಂಕಗಳಿಗೆ ತಲುಪಿದೆ.

ವಾಹನೋದ್ಯಮ, ಉಕ್ಕು ಮತ್ತು ಫಾರ್ಮಾ ಕ್ಷೇತ್ರದ ಶೇರುಗಳು ವಹಿವಾಟಿನಲ್ಲಿ ಚೇತರಿಕೆ ಕಂಡಿದ್ದು,ಐಟಿ ಮತ್ತು ಎಫ್‌ಎಂಸಿಜಿ ಶೇರುಗಳು ಒತ್ತಡವನ್ನು ಎದುರಿಸುತ್ತಿವೆ.

ರಿಲಯನ್ಸ್ ಇಂಡಸ್ಟ್ರೀಸ್ ಶೇರುಗಳು, ಇಂದಿನ ವಹಿವಾಟಿನ ಮುಕ್ತಾಯಕ್ಕೆ ಶೇ.0.82ರಷ್ಟು ಏರಿಕೆ ಕಂಡು 1,090.35 ಅಂಕಗಳಿಗೆ ತಲುಪಿದೆ. ಸ್ಟೆರ್ಲೈಟ್ ಶೇ.2.4ರಷ್ಟು, ಜಿಂದಾಲ್ ಸ್ಟೀಲ್ ಶೇ.1.5 ಹಾಗೂ ಟಾಟಾ ಸ್ಟೀಲ್ ಶೇ.0.70ರಷ್ಟು ಏರಿಕೆ ಕಂಡಿವೆ.
ಸಂಬಂಧಿತ ಮಾಹಿತಿ ಹುಡುಕಿ