ಶೇರುಪೇಟೆಯ ವಹಿವಾಟಿನ ಮುಕ್ತಾಯಕ್ಕೆ ತೊಳಲಾಟದ ಮಧ್ಯೆಯು ಸೂಚ್ಯಂಕ 81 ಪಾಯಿಂಟ್‌ಗಳ ಅಲ್ಪ ಚೇತರಿಕೆ ಕಂಡಿದೆ ಎಂದು ಶೇರುಪೇಟೆ ಮೂಲಗಳು ತಿಳಿಸಿವೆ.
ಬಿಎಸ್‌ಇ-30 ಸೂಚ್ಯಂಕ ಹಿಂದಿನ ದಿನದ ವಹಿವಾಟಿನ ಮುಕ್ತಾಯಕ್ಕೆ 137 ಪಾಯಿಂಟ್‌ಗಳ ಚೇತರಿಕೆ ಕಂಡಿತ್ತು. ಇಂದಿನ ವಹಿವಾಟಿನ ಮುಕ್ತಾಯಕ್ಕೆ 81.73 ಪಾಯಿಂಟ್‌ಗಳ ಕುಸಿತ ಕಂಡು 20,221.39 ಅಂಕಗಳಿಗೆ ತಲುಪಿದೆ.
ಅದರಂತೆ, ರಾಷ್ಟ್ರೀಯ ಮಾರುಕಟ್ಟೆ ನಿಫ್ಟಿ ಸೂಚ್ಯಂಕ ಕೂಡಾ ವಹಿವಾಟಿನ ಮುಕ್ತಾಯಕ್ಕೆ 23.80 ಪಾಯಿಂಟ್‌ಗಳ ಇಳಿಕೆ ಕಂಡು 6,082.00 ಅಂಕಗಳಿಗೆ ತಲುಪಿದೆ.
ಟಾಟಾ ಸ್ಟೀಲ್ ಹಿಂಡಾಲ್ಕೊ ಇಂಡಸ್ಟ್ರೀಸ್, ಬ್ಯಾಂಕಿಂಗ್ ಕ್ಷೇತ್ರ, ಹೆಲ್ತ್ ಕೇರ್, ವಿದ್ಯುತ್ ಕ್ಷೇತ್ರದ ಶೇರುಗಳು ವಹಿವಾಟಿನಲ್ಲಿ ಕುಸಿತ ಕಂಡಿವೆ.